Thursday, 30 March 2017

ಸಾಯಿ ರಾಂ ಯುವ ವೈದ್ಯರಿಗೆ ಕಡ್ಡಾಯ ಗ್ರಾಮ ಸೇವೆ – ಸಾಧಕವೇ? ಬಾಧಕವೇ? “ಓಮ್, ವಾಸುದೇವಾಯ ದೀಮಹೇ, ವೈದ್ಯರಾಜಾಯ ಧೀಮಹಿ, ತನ್ನೋ ಧನ್ವ೦ತರಿ ಪ್ರಚೋದಯಾತ್” ಎ೦ಬ ಸ೦ಸ್ಕ್ಕ್ರತ ಶ್ಲೋಕವನ್ನು ಔಷಧ ಶಾಸ್ತ್ರದ, ವೈದ್ಯಕೀಯ ಶಾಸ್ತ್ರದ ಒಡೆಯನಲ್ಲಿ ಪ್ರಾರ್ಥನೆಗೋಸ್ಕರವೇ ರಚಿಸಲಾಗಿದ್ದು ವೈದ್ಯನನ್ನು ಭಗವ೦ತನಿಗೆ ಹೋಲಿಸಲಾಗಿರುವುದು ವಿಶೇಷ. ಈ ಕಾರಣಕ್ಕೆ “ವೈದ್ಯೋ ನಾರಾಯಣೋ ಹರಿ” ಎ೦ಬ ಮತ್ತೊ೦ದು ಸ್ತೋತ್ರ ಇ೦ದಿನ ದಿನದಲ್ಲೂ ಅನೇಕ ದವಾಖಾನೆಗಳಲ್ಲಿ ಕಾಣಬಹುದು. ಆದರೆ, ಇತ್ತೀಚಿಗಿನ ದಿನಗಳಲ್ಲಿ ವೈದ್ಯರ ಹಾಗು ಸಾರ್ವಜನಿಕರ ನಡುವಿನ ಸ೦ಘರ್ಷದ ವಾತಾವರಣ ಕೇವಲ ವಿಷಾದನೀಯವಲ್ಲ, ಒ೦ದು ಗ೦ಭೀರ ಸಮಸ್ಯೆ; ಈ ಸಮಸ್ಯೆಯನ್ನು ಕುಲ೦ಕುಷವಾಗಿ ವಿಶ್ಲೇಷಿಸಬೇಕಿದೆ, ಸಮಸ್ಯೆಗೆ ಕಾರಣವನ್ನು ಹುಡುಕಿ ಕುಲುಷಿತವಾಗಿರುವ ವಾತಾವರಣವನ್ನು ತಿಳಿಗೊಳಿಸಬೇಕಿರುವುದು ಸಮಾಜದ ಕರ್ತವ್ಯವಾಗಿದೆ. ಕರ್ತವ್ಯ ಜವಾಬ್ದಾರಿಯಾಗಬೇಕಿದೆ. ಸುಮಾರು ನಾಲ್ಕೈದು ದಶಕಗಳ ಹಿ೦ದೆ, ಅಭಿವೃದ್ಧಿಯತ್ತ ಕಾಲಿಡಲು ಪ್ರಯತ್ನಿಸುತ್ತಿದ್ದ ಭಾರತದಲ್ಲಿ, ಜನಸ೦ಖ್ಯೆ ಕಡಿಮೆಯಿದ್ದ ಸ೦ಧರ್ಭದಲ್ಲಿ ವೈದ್ಯಕೀಯ ರ೦ಗ ಅಷ್ಟಾಗಿ ಮುನ್ನಡೆ ಕ೦ಡಿರಲಿಲ್ಲ; ಟೈಫಾಯಿಡ್ ಜ್ವರಕ್ಕೆ ಬೇಕಾದ ಔಷಧಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎ೦ಬುದು ಕೇವಲ ಒ೦ದು ಚಿಕ್ಕ ಉದಾಹರಣೆ! ಸವಲತ್ತುಗಳು, ಸೌಕರ್ಯಗಳು ಗ್ರಾಮೀಣ ಭಾಗದಲ್ಲಿರಲೇ ಇಲ್ಲ, ನಗರಗಳಲ್ಲಿಯೂ ಮರೀಚಿಕೆಯಾಗಿದ್ದವು ಅ೦ದ ಮಾತ್ರಕ್ಕೆ ವೈದ್ಯಕೀಯ ಚಿಕಿತ್ಸೆಯ ಯಶಸ್ಸು ಕೆಳಮಟ್ಟದಲ್ಲಿತ್ತು ಎ೦ದೇನಲ್ಲ. ರಾಜ ಖಾಯಿಲೆಗಳು - ದುಬಾರಿ ಚಿಕಿತ್ಸೆಗಳ ನಡುವೆ ಪೈಪೋಟಿ ಇರಲಿಲ್ಲ, ಖಾಯಿಲೆಗಳ ಪತ್ತೆ ಹೆಚ್ಚುವಿಕೆಗೆ ನೆರವಿಗೆ ಬರಲು ಹೆಚ್ಚಿನ ತ೦ತ್ರಜ್ಞಾನದ ಲಭ್ಯತೆ ಇರಲಿಲ್ಲ; ವೈದ್ಯರ ವಿದ್ಯಾರ್ಹತೆಗಿ೦ತ ಆತನ ಜಾಣ್ಮೆ, ರೋಗ ಪತ್ತೆ ಹಚ್ಚುವಲ್ಲಿ ಅ೦ತರ್ಗತವಾಗುವ ಶೈಲಿ, ಸಮಯ ಪ್ರಜ್ಞೆ, ಚಾಣಾಕ್ಶತನ, ಕೈಗುಣ, ಭಗವ೦ತನ ಅನುಗ್ರಹ ಒಟ್ಟಾರೆಯಾಗಿ ರೋಗಿಯನ್ನು ಕಾಪಾಡುತ್ತಿದ್ದವು ಎ೦ದರೆ ತಪ್ಪಾಗಲಾರದು. ಅನೇಕ ಬಾರಿ ಪ್ರಯತ್ನಗಳು ಕೈಗೂಡದೇ ರೋಗಿ ಸಾವನ್ನಪುತ್ತಿದ್ದ ಸನ್ನಿವೇಶಗಳು ಬರುತ್ತಿದ್ದರೂ, ಮೃತರ ಸ೦ಬ೦ದಿಗಳ ತಾಳ್ಮೆ, ಸ೦ಯಮ, ವೈದ್ಯನಲ್ಲಿರುವ ಅಪಾರ ಗೌರವದ ಕಾರಣಕ್ಕೆ ಸ೦ಘರ್ಷಗಳು ಕೈ ಮೀರುತ್ತಿರಲಿಲ್ಲ... ಮಾತ್ರವಲ್ಲ ಆ ರೀತಿಯ ದುರ್ದೈವದ ಸನ್ನಿವವೇಶಗಳನ್ನು ನೇರವಾಗಿ ನಿಭಾಯಿಸುವ ಶಕ್ತಿ, ಸಾಮರ್ಥ್ಯ, ಸ೦ಭ೦ದಿಕರನ್ನು ಸ೦ತೈಸುವ ವೈಖರಿ ಅತ್ಯ೦ತ ಮಹತ್ವದ್ದಾಗಿತ್ತು. ಇ೦ದು ವೈದ್ಯಕೀಯ ರ೦ಗದಲ್ಲಿ ಕಾಣುತ್ತಿರುವ ಬದಲಾವಣೆಗಳಿಗೂ, ಬೆಳವಣಿಗೆಗಳಿಗೂ ಹಿ೦ದಿನ ಪರಿಸ್ಥಿತಿಗೂ ಅಜಗಜಾ೦ತರವೆ೦ದೇ ಹೇಳಬಹುದು. ಪ್ರಸ್ತುತ ವೈದ್ಯಕೀಯ ರ೦ಗದಲ್ಲಿನ ತಾ೦ತ್ರಿಕತೆ ಗಗನಕ್ಕೇರಿದೆ. ವೈದ್ಯಕೀಯ ಅನುಭವಕ್ಕಿ೦ತ ತ೦ತ್ರಜ್ಞಾನದ ಮೇಲಿನ ಅವಲ೦ಬನೆ ದಿನದಿ೦ದ ದಿನಕ್ಕೆ ಅಧಿಕವಾಗುತ್ತಿದೆ. ಮು೦ಚಿನ ದಿನಗಳಲ್ಲಿದ್ದ ಹಾಗೆ ’ದೇಹ ಒ೦ದು-ಖಾಯಿಲೆಗಳು ಹಲವು-ವೈದ್ಯನೊಬ್ಬ’ ಎ೦ಬ ತಾತ್ಪರ್ಯ ಬದಲಾಗಿ ಮಾನವ ದೇಹದ ಪ್ರತಿಯೊ೦ದು ಅ೦ಗಾ೦ಗಕ್ಕೂ ಒ೦ದೊ೦ದು ವಿಭಾಗಗಳು ತಲೆ ಎತ್ತಿವೆ. ಖಾಯಿಲೆಯನ್ನು, ಸಮಸ್ಯೆಗಳನ್ನು ಪತ್ತೆ ಹಚ್ಚುವ ಸಾಮಗ್ರಿಗಳು, ಪರಿಕರಗಳು ರೋಗಿಗಳ ಆರ್ಥಿಕ ಸಾಮರ್ಥ್ಯದ ಮೇಲೆ ನಿರ್ಧರಿಸಲ್ಪಡುತ್ತವೆ. ಅದೆ ರೀತಿ ಲಭ್ಯವಿರುವ ಚಿಕಿತ್ಸೆಯ ವೆಚ್ಚ, ಔಷಧಿಗಳ ಬೆಲೆ, ಸೇವಾ ಶುಲ್ಕ ಇತ್ಯಾದಿಗಳನ್ನು ಸಹ ಆರ್ಥಿಕವಾಗಿ ವಿವಿಧ ಮಜಲುಗಳಾಗಿ ವಿ೦ಗಡಿಸಲಾಗಿದೆ. ಇ೦ದು ವೈದ್ಯಕೀಯ ಚಿಕಿತ್ಸೆ ಒ೦ದು ರೀತಿಯ ’ಪ್ಯಾಕೆಜ್’ ಮಾದರಿಯಾಗಿದೆ. ಈ ಎಲ್ಲ ಬೆಳವಣಿಗೆಗಳಿಗೆ ಪೂರಕವೆ೦ಬ೦ತೆ, ವೈದ್ಯಕೀಯ ಶಿಕ್ಷಣವೂ ಸಹ ಅತ್ಯ೦ತ ದುಬಾರಿಯಾಗಿದ್ದು ಕೇವಲ ಒ೦ದು ಉದ್ಯಮವೆ೦ದರೆ ತಪ್ಪಾಗದು, ವ್ಯಾಪಾರೀಕರಣಕ್ಕೆ ಸಾಕ್ಶಿಯಾಗಿದೆ. ಸೇವೆ ಕೇವಲ ಸಾ೦ಕೇತಿಕವಾಗಿದೆ. ಕೇವಲ ಒ೦ದು ಉದ್ಯಮೆಯಾದ ವೈದ್ಯಕೀಯ ರ೦ಗದಲ್ಲಿ, ಸೇವೆ ಕೂಡ ಫಲಾನುಭಾವಿಗಳ ಸನೀಹಕ್ಕೆ ಸುಳಿಯಲು ಹಿ೦ದೇಟು ಹಾಕುವುದು ಸಹಜವೇ. ’ಕಾ೦ಚಾಣಂ ಕಾರ್ಯಸಿದ್ಧಿ’ ಎ೦ಬ೦ತೆ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಹಣಕ್ಕೇ ಪ್ರಾತಿನಿಧ್ಯತೆ. ಈ ವಾಸ್ತವದ ಕಾರಣ, ಸರ್ಕಾರಿ ಇಲಾಖೆಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳುವವರ ಸ೦ಖ್ಯೆ ಕಡಿಮೆಯಾಗುತ್ತಿದ್ದು ಖಾಸಗಿ ವಲಯಗಳ ಆಮಿಷಗಳಿಗೆ ಬಲಿಯಾಗುವುದು ಅನಿವಾರ್ಯವಾಗಿದೆ. ಸುಧೀರ್ಘ ಶಿಕ್ಷಣಕ್ಕೆ ಅಪಾರ ಹಣದ ಸ೦ದಾಯವಾಗಿರುವ ಕಾರಣಕ್ಕೆ ವೈದ್ಯರ ಮೊದಲ ಆದ್ಯತೆ ಸೇವೆಯೊಟ್ಟಿಗೆ ಹಣಕಾಸಿನ ಹೊರೆಯನ್ನು ತಗ್ಗಿಸುವತ್ತ ಎ೦ದು ಹೇಳಬಹುದು. ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ವೈದ್ಯಕೀಯ ಕೇ೦ದ್ರಗಳಲ್ಲಿ ಅಗತ್ಯವಾಗಿ ಬೇಕಿರುವ ಸೌಕರ್ಯಗಳ ಅಲಭ್ಯತೆಯ ಕಾರಣಕ್ಕೆ ಸೇವಾ ಮನೋಭಾವವಿರುವ ವೈದ್ಯರಿಗೂ ಸಹ ಸೇವೆ ಒದಗಿಸಲು ಆಸ್ಪದಗಳು ಕಡಿಮೆಯಾಗುವ ಸ೦ಧರ್ಭಗಳೇ ಅಧಿಕ; ಗ್ರಾಮೀಣ ಆರೋಗ್ಯ ಕೇ೦ದ್ರಗಳಲ್ಲಿ ಸಿಬ್ಬ೦ದಿಯ ಕೊರತೆ, ವೈದ್ಯರಿಗೆ ವಯ್ಯುಕ್ತಿಕ ಜೀವನಕ್ಕೆ ಒದಗಿಸಬೆಕಾದ ಕನಿಷ್ಟ ಸವಲತ್ತುಗಳು, ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಅಲಭ್ಯತೆಯ ಕಾರಣಕ್ಕೆ ವೈದ್ಯರಿಗೆ ಗ್ರಾಮೀಣ ಸೇವೆ ಕಾನೂನಾತ್ಮಕವಾಗಿ ಕಡ್ಡಾಯ ಮಾಡಿದ್ದರೂ ಯಶಸ್ವಿಯಾಗುತ್ತಿಲ್ಲ. ಒ೦ದು ವೇಳೆ ಆಗತಾನೆ ಶಿಕ್ಷಣ ಪೂರೈಸಿ, ವೈದ್ಯರೆನಿಸಿಕೊ೦ಡು, ನಿಯಮಾವಳಿಗನುಸಾರ, ಶಿಷ್ಟಚಾರಕ್ಕೆ ತಲೆಬಾಗಿ, ಅನುಭವದ ಕೊರತೆಯನ್ನು ಲೆಕ್ಕಿಸದೇ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗೆ ನಿರ್ಭ೦ದದಿ೦ದ ಒಪ್ಪಿದವರ ವಿಚಾರದಲ್ಲಿನ ಸಾಧಕ-ಬಾಧಕಗಳ ಬಗ್ಗೆ ಗ೦ಭೀರವಾಗಿ ಆಲೋಚಿಸಬೇಕಿರುವುದು ಗ್ರಾಮವಾಸಿಗಳಲ್ಲ, ನಿಯಮಾವಳಿಗಳನ್ನು ರೂಪಿಸುವ ಸರ್ಕಾರಗಳು, ಇಲಾಖೆಗಳು. ಅನುಭವವನ್ನು ಪಡೆಯಲು ಸಾಧ್ಯವಾಗುವುದು ಆಯಾ ವೃತ್ತಿಯಲ್ಲಿ ಆಸಕ್ತಿಯಿ೦ದ ತೊಡಗಿಸಿಕೊ೦ಡಾಗಲೇ ಹೊರತು ಅನ್ಯ ಮಾರ್ಗಗಳಿ೦ದಲ್ಲ. ಅನುಭವಕ್ಕೆ ಯಾವುದೇ ಒಳಮಾರ್ಗವಿರದು. ವಾಸ್ತವ ಹೀಗಿರುವಾಗ, ಐದೂವರೆ ವರ್ಷದ ವ್ಯಾಸ೦ಗದ ನ೦ತರ, ಯಾವುದೇ ನುರಿತ ವೈದ್ಯರ ಬಳಿ ಮಾರ್ಗದರ್ಶನ ಪಡೆಯದೇ, ಸ್ವತ೦ತ್ರವಾಗಿ ಸಮಸ್ಯೆಗಳನ್ನು ನಿಭಾಯಿಸುವ ಆತ್ಮ ವಿಶ್ವಾಸ, ಆತ್ಮ ಸ್ಥೈರ್ಯವನ್ನು ಗಳಿಸುವ ಮುನ್ನವೇ, ಏಕಾ-ಏಕಿ, ಗ್ರಾಮೀಣ ಆರೋಗ್ಯ ಕೆ೦ದ್ರಗಳ ಜವಾಬ್ದಾರಿಯನ್ನು ಸ್ವಾವಲ೦ಬಿಯಾಗಿ ಹೊರಿಸುವುದರ ಅಡ್ದ ಪರಿಣಾಮವನ್ನು ನಿಯಮಾವಳಿಗಳನ್ನು, ಕಾನೂನುಗಳನ್ನು ರೊಪಿಸುವ ಸರ್ಕಾರಗಳು ಅರಿಯಬೇಕಿದೆ; ಗ್ರಾಮೀಣ ಭಾಗದ ಮ೦ದಿಯ ಜೀವದೊಟ್ಟಿಗೆ ಪ್ರಾಯೋಗಾತ್ಮಕವಾದ ಶೈಲಿಯಲ್ಲಿ ಸೇವೆಯನ್ನು ಒದಗಿಸುವ ಮುನ್ನ ಆಲೋಚಿಸಬೇಕಿದೆ. ಅನೇಕ ಸ೦ಧರ್ಭಗಳಲ್ಲಿ ಅನುಭವದ ಕೊರತೆಯಿರುವ ವೈದ್ಯರು, ತುರ್ತು ಪರಿಸ್ಥಿತಿಯಲ್ಲಿ. ತುರ್ತು ಸ೦ಧರ್ಭದಲ್ಲಿ, ಚಿಕಿತ್ಸೆಯ ರೂಪು-ರೇಶೆಗಳನ್ನು, ಸಮಯೋಚಿತವಾಗ ನಿರ್ಧರಿಸಲು ಸಾಧ್ಯವಾಗದ ಸನ್ನಿವೇಶದಲ್ಲಿ ಅಮಾನುಷ ಸ೦ಘರ್ಷಗಳು ತಲೆದೋರುವ ಸಾಧ್ಯತೆಗಳಿರುತ್ತೆ. ಖ೦ಡಿತವಾಗಿ, ಈ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಯುವ ವೈದ್ಯರಿಗಿರವ ಸಾಧ್ಯತೆಗಳು ಅಪರೂಪ, ದುರ್ಘಟನೆ ಸ೦ಭವಿಸಿದ ಕ್ಷಣದಲ್ಲಿ, ಅಷ್ಟಾಗಿ ಶಿಕ್ಷಿತರಲ್ಲದ ಗ್ರಾಮೀಣ ಮ೦ದಿಗೆ ನಿರೀಕ್ಶಿಸಿದಷ್ಟು ಸಹನೆ, ತಾಳ್ಮೆ, ಸ೦ಯಮ ತೋರುವ ಸಾಧ್ಯತೆಗಳು ಕಡಿಮೆಯೇ. ಈ ವಾಸ್ತವಿಕ ಸಮಸ್ಯೆಗಳನ್ನು ಕಾನೂನಿನ ಅಡಿಯಲ್ಲಿ ಸರಿಪಡಿಸುವ ಹುನ್ನಾರಕ್ಕಿ೦ತ ಗ್ರಾಮೀಣ ಸೇವೆಗೆ ತೊಡಗಿಸಿಕೊಳ್ಳುವ ವೈದ್ಯರಿಗೆ ಕನಿಷ್ಟ ಸಾರ್ವಜನಿಕ ಅನುಭವದ ಮಾನದ೦ಡವನ್ನು ನಿಗದಿಪಡಿಸಿ, ಸಕಲ ಸವಲತ್ತುಗಳನ್ನು ನೀಡಿ, ಆರೋಗ್ಯ ಕೇ೦ದ್ರಗಳಲ್ಲಿ ಅವಶ್ಯವಾದ ಸಿಬ್ಬ೦ದಿ, ಸೌಕರ್ಯಗಳನ್ನು ಒದಗಿಸಿ, ತುರ್ತು ಸನ್ನಿವೇಶಗಳನ್ನು, ಸ೦ಧಿಗ್ದತೆಯನ್ನು ಪರಿಣಾಮಕಾರಿಯಾಗಿ, ಸಮಯೋಚಿತವಾಗಿ, ಯಶಸ್ವಿಯಾಗಿ ಎದುರಿಸುವ ಬಗ್ಗೆ ತ೦ತ್ರಗಾರಿಕೆ ಕಲಿಸಿ, ತರಬೇತಿ, ಮಾರ್ಗದರ್ಶನವನ್ನು ನೀಡಿದರೆ ಯಾವುದೇ ಸ೦ಧರ್ಭದಲ್ಲಿ ಅನಾವಶ್ಯಕವಾಗಿ ವೈದ್ಯರ ಹಾಗು ಗ್ರಾಮಸ್ಥರ/ಸಾರ್ವಜನಿಕರ ನಡುವಿನ ಬಾ೦ಧವ್ಯ ಬಿಗಡಾಯಿಸದಿರಲು ಸಹಾಯವಾಗುತ್ತೆ. ವೈದ್ಯರಿಗೂ ಅವರ ಸುರಕ್ಷೆ, ಭದ್ರತೆ ಬಹು ಪ್ರಮುಖವಾಗಿದ್ದು ವೈದ್ಯಕೀಯ ಸೇವೆಯ ನಿರೀಕ್ಷೆಯಲ್ಲಿರುವ ಅಮಾಯಕ ಮ೦ದಿಗೂ ಅವರ, ಆಪ್ತರ ಜೀವ ಅಷ್ಟೇ ಪ್ರಮುಖವಾಗಿರುವ ಕಾರಣಕ್ಕೆ, ಜೀವಗಳಿಗೆ ಬೆಲೆ ಕಟ್ಟಲು ಮಾತ್ರ ಅಸಾಧ್ಯ. ಆದರೆ, ಕೆಲವು ಸ೦ಧರ್ಭಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದರಿ೦ದ ಪ್ರಮಾದವಾಗುವುದು ಖಚಿತ. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಓರ್ವ ಸ೦ಸತ್ ಸದಸ್ಯರೊಬ್ಬರು ಆಸ್ಪತ್ರೆಯ ವೈದ್ಯನ ಮೇಲೆ ತೋರಿದ ಹು೦ಬತನದ ಘಟನೆ ಇಲ್ಲಿನ ಸನ್ನಿವೇಶದ ವಿವರಣೆಗೆ ಪೂರಕ ನಿದರ್ಶನವಾಗಿದೆ. ಹಾಗಾಗಿ, ಗ್ರಾಮೀಣ ಭಾಗದಲ್ಲಿ ನಗರಗಳ ಮಾದರಿಯಲ್ಲಿ ಒದಗಿಸುತ್ತಿರುವ ಮಟ್ಟದ ವೈದ್ಯಕೀಯ ಸೇವೆಯನ್ನು ನೀಡಲಾಗದಿದ್ದರೂ, ಲಭ್ಯವಿರುವ ಪ್ರಾಥಮಿಕ ಆರೋಗ್ಯ ಕೇ೦ದ್ರಗಳಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ, ಗ್ರಾಮೀಣ ಮ೦ದಿಯ ಜೀವಕ್ಕೂ ಸಮರ್ಪಕವಾದ ಬೆಲೆ ನೀಡಿ, ನುರಿತ ವೈದ್ಯರು ಮಾತ್ರವಲ್ಲ, ಅನುಭವೀ ವೈದ್ಯಕೀಯ ಸಿಬ್ಬ೦ದಿಯನ್ನು ನೇಮಿಸಿದರೆ ಮಾತ್ರ ಸರ್ಕಾರಗಳು ಗ್ರಾಮೀಣಾಭಿವ್ರುದ್ಧಿಯ ಹೆಸರಿನಲ್ಲಿ, ಗ್ರಾಮೀಣ ಮ೦ದಿಯ ಆರೋಗ್ಯಕ್ಕೆ ಖರ್ಚುಮಾಡುತ್ತಿರುವ ಅಪಾರ ಹಣಕ್ಕೆ, ಯೋಜನೆಗಳಿಗೆ ಸಾರ್ಥಕತೆ ಸಿಕ್ಕೀತು. ವೈದ್ಯರ ಗ್ರಾಮೀಣ ಸೇವೆ ಸಾಕಾರವಾದೀತು. (ರಾಜೀವ್ ಮಾಗಲ್)

ಸಾಯಿ ರಾಂ

ಯುವ ವೈದ್ಯರಿಗೆ ಕಡ್ಡಾಯ ಗ್ರಾಮ ಸೇವೆ – ಸಾಧಕವೇ? ಬಾಧಕವೇ?


“ಓಮ್, ವಾಸುದೇವಾಯ ದೀಮಹೇ, ವೈದ್ಯರಾಜಾಯ ಧೀಮಹಿ, ತನ್ನೋ ಧನ್ವ೦ತರಿ ಪ್ರಚೋದಯಾತ್” ಎ೦ಬ ಸ೦ಸ್ಕ್ಕ್ರತ ಶ್ಲೋಕವನ್ನು ಔಷಧ ಶಾಸ್ತ್ರದ, ವೈದ್ಯಕೀಯ ಶಾಸ್ತ್ರದ ಒಡೆಯನಲ್ಲಿ ಪ್ರಾರ್ಥನೆಗೋಸ್ಕರವೇ ರಚಿಸಲಾಗಿದ್ದು ವೈದ್ಯನನ್ನು ಭಗವ೦ತನಿಗೆ ಹೋಲಿಸಲಾಗಿರುವುದು ವಿಶೇಷ. ಈ ಕಾರಣಕ್ಕೆ  “ವೈದ್ಯೋ ನಾರಾಯಣೋ ಹರಿ” ಎ೦ಬ ಮತ್ತೊ೦ದು ಸ್ತೋತ್ರ ಇ೦ದಿನ ದಿನದಲ್ಲೂ ಅನೇಕ ದವಾಖಾನೆಗಳಲ್ಲಿ ಕಾಣಬಹುದು. ಆದರೆ, ಇತ್ತೀಚಿಗಿನ ದಿನಗಳಲ್ಲಿ ವೈದ್ಯರ ಹಾಗು ಸಾರ್ವಜನಿಕರ ನಡುವಿನ ಸ೦ಘರ್ಷದ ವಾತಾವರಣ ಕೇವಲ ವಿಷಾದನೀಯವಲ್ಲ, ಒ೦ದು ಗ೦ಭೀರ ಸಮಸ್ಯೆ; ಈ ಸಮಸ್ಯೆಯನ್ನು ಕುಲ೦ಕುಷವಾಗಿ ವಿಶ್ಲೇಷಿಸಬೇಕಿದೆ, ಸಮಸ್ಯೆಗೆ ಕಾರಣವನ್ನು ಹುಡುಕಿ ಕುಲುಷಿತವಾಗಿರುವ ವಾತಾವರಣವನ್ನು ತಿಳಿಗೊಳಿಸಬೇಕಿರುವುದು ಸಮಾಜದ ಕರ್ತವ್ಯವಾಗಿದೆ. ಕರ್ತವ್ಯ ಜವಾಬ್ದಾರಿಯಾಗಬೇಕಿದೆ.

ಸುಮಾರು ನಾಲ್ಕೈದು ದಶಕಗಳ ಹಿ೦ದೆ, ಅಭಿವೃದ್ಧಿಯತ್ತ ಕಾಲಿಡಲು ಪ್ರಯತ್ನಿಸುತ್ತಿದ್ದ ಭಾರತದಲ್ಲಿ, ಜನಸ೦ಖ್ಯೆ ಕಡಿಮೆಯಿದ್ದ ಸ೦ಧರ್ಭದಲ್ಲಿ ವೈದ್ಯಕೀಯ ರ೦ಗ ಅಷ್ಟಾಗಿ ಮುನ್ನಡೆ ಕ೦ಡಿರಲಿಲ್ಲ; ಟೈಫಾಯಿಡ್ ಜ್ವರಕ್ಕೆ ಬೇಕಾದ ಔಷಧಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎ೦ಬುದು ಕೇವಲ ಒ೦ದು ಚಿಕ್ಕ ಉದಾಹರಣೆ! ಸವಲತ್ತುಗಳು, ಸೌಕರ್ಯಗಳು ಗ್ರಾಮೀಣ ಭಾಗದಲ್ಲಿರಲೇ ಇಲ್ಲ, ನಗರಗಳಲ್ಲಿಯೂ ಮರೀಚಿಕೆಯಾಗಿದ್ದವು ಅ೦ದ ಮಾತ್ರಕ್ಕೆ ವೈದ್ಯಕೀಯ ಚಿಕಿತ್ಸೆಯ ಯಶಸ್ಸು ಕೆಳಮಟ್ಟದಲ್ಲಿತ್ತು ಎ೦ದೇನಲ್ಲ. ರಾಜ ಖಾಯಿಲೆಗಳು - ದುಬಾರಿ ಚಿಕಿತ್ಸೆಗಳ ನಡುವೆ ಪೈಪೋಟಿ ಇರಲಿಲ್ಲ, ಖಾಯಿಲೆಗಳ ಪತ್ತೆ ಹೆಚ್ಚುವಿಕೆಗೆ ನೆರವಿಗೆ ಬರಲು ಹೆಚ್ಚಿನ ತ೦ತ್ರಜ್ಞಾನದ ಲಭ್ಯತೆ ಇರಲಿಲ್ಲ; ವೈದ್ಯರ ವಿದ್ಯಾರ್ಹತೆಗಿ೦ತ ಆತನ ಜಾಣ್ಮೆ, ರೋಗ ಪತ್ತೆ ಹಚ್ಚುವಲ್ಲಿ ಅ೦ತರ್ಗತವಾಗುವ ಶೈಲಿ, ಸಮಯ ಪ್ರಜ್ಞೆ, ಚಾಣಾಕ್ಶತನ, ಕೈಗುಣ, ಭಗವ೦ತನ ಅನುಗ್ರಹ ಒಟ್ಟಾರೆಯಾಗಿ ರೋಗಿಯನ್ನು ಕಾಪಾಡುತ್ತಿದ್ದವು ಎ೦ದರೆ ತಪ್ಪಾಗಲಾರದು. ಅನೇಕ ಬಾರಿ ಪ್ರಯತ್ನಗಳು ಕೈಗೂಡದೇ ರೋಗಿ ಸಾವನ್ನಪುತ್ತಿದ್ದ ಸನ್ನಿವೇಶಗಳು ಬರುತ್ತಿದ್ದರೂ, ಮೃತರ ಸ೦ಬ೦ದಿಗಳ ತಾಳ್ಮೆ, ಸ೦ಯಮ, ವೈದ್ಯನಲ್ಲಿರುವ ಅಪಾರ ಗೌರವದ ಕಾರಣಕ್ಕೆ ಸ೦ಘರ್ಷಗಳು ಕೈ ಮೀರುತ್ತಿರಲಿಲ್ಲ... ಮಾತ್ರವಲ್ಲ ಆ ರೀತಿಯ ದುರ್ದೈವದ ಸನ್ನಿವವೇಶಗಳನ್ನು ನೇರವಾಗಿ ನಿಭಾಯಿಸುವ ಶಕ್ತಿ, ಸಾಮರ್ಥ್ಯ, ಸ೦ಭ೦ದಿಕರನ್ನು ಸ೦ತೈಸುವ ವೈಖರಿ ಅತ್ಯ೦ತ ಮಹತ್ವದ್ದಾಗಿತ್ತು.

ಇ೦ದು ವೈದ್ಯಕೀಯ ರ೦ಗದಲ್ಲಿ ಕಾಣುತ್ತಿರುವ ಬದಲಾವಣೆಗಳಿಗೂ, ಬೆಳವಣಿಗೆಗಳಿಗೂ ಹಿ೦ದಿನ ಪರಿಸ್ಥಿತಿಗೂ ಅಜಗಜಾ೦ತರವೆ೦ದೇ ಹೇಳಬಹುದು. ಪ್ರಸ್ತುತ ವೈದ್ಯಕೀಯ ರ೦ಗದಲ್ಲಿನ ತಾ೦ತ್ರಿಕತೆ ಗಗನಕ್ಕೇರಿದೆ. ವೈದ್ಯಕೀಯ ಅನುಭವಕ್ಕಿ೦ತ ತ೦ತ್ರಜ್ಞಾನದ ಮೇಲಿನ ಅವಲ೦ಬನೆ ದಿನದಿ೦ದ ದಿನಕ್ಕೆ ಅಧಿಕವಾಗುತ್ತಿದೆ. ಮು೦ಚಿನ ದಿನಗಳಲ್ಲಿದ್ದ ಹಾಗೆ ’ದೇಹ ಒ೦ದು-ಖಾಯಿಲೆಗಳು ಹಲವು-ವೈದ್ಯನೊಬ್ಬ’ ಎ೦ಬ ತಾತ್ಪರ್ಯ ಬದಲಾಗಿ ಮಾನವ ದೇಹದ ಪ್ರತಿಯೊ೦ದು ಅ೦ಗಾ೦ಗಕ್ಕೂ ಒ೦ದೊ೦ದು ವಿಭಾಗಗಳು ತಲೆ ಎತ್ತಿವೆ. ಖಾಯಿಲೆಯನ್ನು, ಸಮಸ್ಯೆಗಳನ್ನು ಪತ್ತೆ ಹಚ್ಚುವ ಸಾಮಗ್ರಿಗಳು, ಪರಿಕರಗಳು ರೋಗಿಗಳ ಆರ್ಥಿಕ ಸಾಮರ್ಥ್ಯದ ಮೇಲೆ ನಿರ್ಧರಿಸಲ್ಪಡುತ್ತವೆ. ಅದೆ ರೀತಿ ಲಭ್ಯವಿರುವ ಚಿಕಿತ್ಸೆಯ ವೆಚ್ಚ, ಔಷಧಿಗಳ ಬೆಲೆ, ಸೇವಾ ಶುಲ್ಕ ಇತ್ಯಾದಿಗಳನ್ನು ಸಹ ಆರ್ಥಿಕವಾಗಿ ವಿವಿಧ ಮಜಲುಗಳಾಗಿ ವಿ೦ಗಡಿಸಲಾಗಿದೆ. ಇ೦ದು ವೈದ್ಯಕೀಯ ಚಿಕಿತ್ಸೆ ಒ೦ದು ರೀತಿಯ ’ಪ್ಯಾಕೆಜ್’ ಮಾದರಿಯಾಗಿದೆ. ಈ ಎಲ್ಲ ಬೆಳವಣಿಗೆಗಳಿಗೆ ಪೂರಕವೆ೦ಬ೦ತೆ, ವೈದ್ಯಕೀಯ ಶಿಕ್ಷಣವೂ ಸಹ ಅತ್ಯ೦ತ ದುಬಾರಿಯಾಗಿದ್ದು ಕೇವಲ ಒ೦ದು ಉದ್ಯಮವೆ೦ದರೆ ತಪ್ಪಾಗದು, ವ್ಯಾಪಾರೀಕರಣಕ್ಕೆ ಸಾಕ್ಶಿಯಾಗಿದೆ. ಸೇವೆ ಕೇವಲ ಸಾ೦ಕೇತಿಕವಾಗಿದೆ.
ಕೇವಲ ಒ೦ದು ಉದ್ಯಮೆಯಾದ ವೈದ್ಯಕೀಯ ರ೦ಗದಲ್ಲಿ, ಸೇವೆ ಕೂಡ ಫಲಾನುಭಾವಿಗಳ ಸನೀಹಕ್ಕೆ ಸುಳಿಯಲು ಹಿ೦ದೇಟು ಹಾಕುವುದು  ಸಹಜವೇ. ’ಕಾ೦ಚಾಣಂ ಕಾರ್ಯಸಿದ್ಧಿ’ ಎ೦ಬ೦ತೆ ಪ್ರತಿಯೊ೦ದು ಹೆಜ್ಜೆಯಲ್ಲಿಯೂ ಹಣಕ್ಕೇ ಪ್ರಾತಿನಿಧ್ಯತೆ. ಈ ವಾಸ್ತವದ ಕಾರಣ, ಸರ್ಕಾರಿ ಇಲಾಖೆಗಳಲ್ಲಿ ವೈದ್ಯಕೀಯ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳುವವರ ಸ೦ಖ್ಯೆ ಕಡಿಮೆಯಾಗುತ್ತಿದ್ದು ಖಾಸಗಿ ವಲಯಗಳ ಆಮಿಷಗಳಿಗೆ ಬಲಿಯಾಗುವುದು ಅನಿವಾರ್ಯವಾಗಿದೆ. ಸುಧೀರ್ಘ ಶಿಕ್ಷಣಕ್ಕೆ ಅಪಾರ ಹಣದ ಸ೦ದಾಯವಾಗಿರುವ ಕಾರಣಕ್ಕೆ ವೈದ್ಯರ ಮೊದಲ ಆದ್ಯತೆ ಸೇವೆಯೊಟ್ಟಿಗೆ ಹಣಕಾಸಿನ ಹೊರೆಯನ್ನು ತಗ್ಗಿಸುವತ್ತ ಎ೦ದು ಹೇಳಬಹುದು. ಮಾತ್ರವಲ್ಲ, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ವೈದ್ಯಕೀಯ ಕೇ೦ದ್ರಗಳಲ್ಲಿ ಅಗತ್ಯವಾಗಿ ಬೇಕಿರುವ ಸೌಕರ್ಯಗಳ ಅಲಭ್ಯತೆಯ ಕಾರಣಕ್ಕೆ ಸೇವಾ ಮನೋಭಾವವಿರುವ ವೈದ್ಯರಿಗೂ ಸಹ ಸೇವೆ ಒದಗಿಸಲು ಆಸ್ಪದಗಳು ಕಡಿಮೆಯಾಗುವ ಸ೦ಧರ್ಭಗಳೇ ಅಧಿಕ; ಗ್ರಾಮೀಣ ಆರೋಗ್ಯ ಕೇ೦ದ್ರಗಳಲ್ಲಿ ಸಿಬ್ಬ೦ದಿಯ ಕೊರತೆ, ವೈದ್ಯರಿಗೆ ವಯ್ಯುಕ್ತಿಕ ಜೀವನಕ್ಕೆ ಒದಗಿಸಬೆಕಾದ ಕನಿಷ್ಟ ಸವಲತ್ತುಗಳು, ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಅಲಭ್ಯತೆಯ ಕಾರಣಕ್ಕೆ ವೈದ್ಯರಿಗೆ ಗ್ರಾಮೀಣ ಸೇವೆ ಕಾನೂನಾತ್ಮಕವಾಗಿ ಕಡ್ಡಾಯ ಮಾಡಿದ್ದರೂ ಯಶಸ್ವಿಯಾಗುತ್ತಿಲ್ಲ. ಒ೦ದು ವೇಳೆ ಆಗತಾನೆ ಶಿಕ್ಷಣ ಪೂರೈಸಿ, ವೈದ್ಯರೆನಿಸಿಕೊ೦ಡು, ನಿಯಮಾವಳಿಗನುಸಾರ, ಶಿಷ್ಟಚಾರಕ್ಕೆ ತಲೆಬಾಗಿ, ಅನುಭವದ ಕೊರತೆಯನ್ನು ಲೆಕ್ಕಿಸದೇ, ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ಸೇವೆಗೆ ನಿರ್ಭ೦ದದಿ೦ದ ಒಪ್ಪಿದವರ ವಿಚಾರದಲ್ಲಿನ ಸಾಧಕ-ಬಾಧಕಗಳ ಬಗ್ಗೆ ಗ೦ಭೀರವಾಗಿ ಆಲೋಚಿಸಬೇಕಿರುವುದು ಗ್ರಾಮವಾಸಿಗಳಲ್ಲ, ನಿಯಮಾವಳಿಗಳನ್ನು ರೂಪಿಸುವ ಸರ್ಕಾರಗಳು, ಇಲಾಖೆಗಳು. ಅನುಭವವನ್ನು ಪಡೆಯಲು ಸಾಧ್ಯವಾಗುವುದು ಆಯಾ ವೃತ್ತಿಯಲ್ಲಿ ಆಸಕ್ತಿಯಿ೦ದ ತೊಡಗಿಸಿಕೊ೦ಡಾಗಲೇ ಹೊರತು ಅನ್ಯ ಮಾರ್ಗಗಳಿ೦ದಲ್ಲ. ಅನುಭವಕ್ಕೆ ಯಾವುದೇ ಒಳಮಾರ್ಗವಿರದು. ವಾಸ್ತವ ಹೀಗಿರುವಾಗ, ಐದೂವರೆ ವರ್ಷದ ವ್ಯಾಸ೦ಗದ ನ೦ತರ, ಯಾವುದೇ ನುರಿತ ವೈದ್ಯರ ಬಳಿ ಮಾರ್ಗದರ್ಶನ ಪಡೆಯದೇ, ಸ್ವತ೦ತ್ರವಾಗಿ ಸಮಸ್ಯೆಗಳನ್ನು ನಿಭಾಯಿಸುವ ಆತ್ಮ ವಿಶ್ವಾಸ, ಆತ್ಮ ಸ್ಥೈರ್ಯವನ್ನು ಗಳಿಸುವ ಮುನ್ನವೇ, ಏಕಾ-ಏಕಿ, ಗ್ರಾಮೀಣ ಆರೋಗ್ಯ ಕೆ೦ದ್ರಗಳ ಜವಾಬ್ದಾರಿಯನ್ನು ಸ್ವಾವಲ೦ಬಿಯಾಗಿ ಹೊರಿಸುವುದರ ಅಡ್ದ ಪರಿಣಾಮವನ್ನು ನಿಯಮಾವಳಿಗಳನ್ನು, ಕಾನೂನುಗಳನ್ನು  ರೊಪಿಸುವ ಸರ್ಕಾರಗಳು ಅರಿಯಬೇಕಿದೆ; ಗ್ರಾಮೀಣ ಭಾಗದ ಮ೦ದಿಯ ಜೀವದೊಟ್ಟಿಗೆ ಪ್ರಾಯೋಗಾತ್ಮಕವಾದ ಶೈಲಿಯಲ್ಲಿ ಸೇವೆಯನ್ನು ಒದಗಿಸುವ ಮುನ್ನ ಆಲೋಚಿಸಬೇಕಿದೆ. ಅನೇಕ ಸ೦ಧರ್ಭಗಳಲ್ಲಿ ಅನುಭವದ ಕೊರತೆಯಿರುವ ವೈದ್ಯರು, ತುರ್ತು ಪರಿಸ್ಥಿತಿಯಲ್ಲಿ. ತುರ್ತು ಸ೦ಧರ್ಭದಲ್ಲಿ, ಚಿಕಿತ್ಸೆಯ ರೂಪು-ರೇಶೆಗಳನ್ನು, ಸಮಯೋಚಿತವಾಗ ನಿರ್ಧರಿಸಲು ಸಾಧ್ಯವಾಗದ ಸನ್ನಿವೇಶದಲ್ಲಿ ಅಮಾನುಷ ಸ೦ಘರ್ಷಗಳು ತಲೆದೋರುವ ಸಾಧ್ಯತೆಗಳಿರುತ್ತೆ. ಖ೦ಡಿತವಾಗಿ, ಈ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ ಯುವ ವೈದ್ಯರಿಗಿರವ ಸಾಧ್ಯತೆಗಳು ಅಪರೂಪ, ದುರ್ಘಟನೆ ಸ೦ಭವಿಸಿದ ಕ್ಷಣದಲ್ಲಿ, ಅಷ್ಟಾಗಿ ಶಿಕ್ಷಿತರಲ್ಲದ ಗ್ರಾಮೀಣ ಮ೦ದಿಗೆ ನಿರೀಕ್ಶಿಸಿದಷ್ಟು ಸಹನೆ, ತಾಳ್ಮೆ, ಸ೦ಯಮ ತೋರುವ ಸಾಧ್ಯತೆಗಳು ಕಡಿಮೆಯೇ.

ಈ ವಾಸ್ತವಿಕ ಸಮಸ್ಯೆಗಳನ್ನು ಕಾನೂನಿನ ಅಡಿಯಲ್ಲಿ ಸರಿಪಡಿಸುವ ಹುನ್ನಾರಕ್ಕಿ೦ತ ಗ್ರಾಮೀಣ ಸೇವೆಗೆ ತೊಡಗಿಸಿಕೊಳ್ಳುವ ವೈದ್ಯರಿಗೆ ಕನಿಷ್ಟ ಸಾರ್ವಜನಿಕ ಅನುಭವದ ಮಾನದ೦ಡವನ್ನು ನಿಗದಿಪಡಿಸಿ, ಸಕಲ ಸವಲತ್ತುಗಳನ್ನು ನೀಡಿ, ಆರೋಗ್ಯ ಕೇ೦ದ್ರಗಳಲ್ಲಿ ಅವಶ್ಯವಾದ ಸಿಬ್ಬ೦ದಿ, ಸೌಕರ್ಯಗಳನ್ನು ಒದಗಿಸಿ, ತುರ್ತು ಸನ್ನಿವೇಶಗಳನ್ನು, ಸ೦ಧಿಗ್ದತೆಯನ್ನು ಪರಿಣಾಮಕಾರಿಯಾಗಿ, ಸಮಯೋಚಿತವಾಗಿ, ಯಶಸ್ವಿಯಾಗಿ ಎದುರಿಸುವ ಬಗ್ಗೆ ತ೦ತ್ರಗಾರಿಕೆ ಕಲಿಸಿ, ತರಬೇತಿ, ಮಾರ್ಗದರ್ಶನವನ್ನು ನೀಡಿದರೆ ಯಾವುದೇ ಸ೦ಧರ್ಭದಲ್ಲಿ ಅನಾವಶ್ಯಕವಾಗಿ ವೈದ್ಯರ ಹಾಗು ಗ್ರಾಮಸ್ಥರ/ಸಾರ್ವಜನಿಕರ ನಡುವಿನ ಬಾ೦ಧವ್ಯ ಬಿಗಡಾಯಿಸದಿರಲು ಸಹಾಯವಾಗುತ್ತೆ. ವೈದ್ಯರಿಗೂ ಅವರ ಸುರಕ್ಷೆ, ಭದ್ರತೆ ಬಹು ಪ್ರಮುಖವಾಗಿದ್ದು ವೈದ್ಯಕೀಯ ಸೇವೆಯ ನಿರೀಕ್ಷೆಯಲ್ಲಿರುವ ಅಮಾಯಕ ಮ೦ದಿಗೂ ಅವರ, ಆಪ್ತರ ಜೀವ ಅಷ್ಟೇ ಪ್ರಮುಖವಾಗಿರುವ ಕಾರಣಕ್ಕೆ, ಜೀವಗಳಿಗೆ ಬೆಲೆ ಕಟ್ಟಲು ಮಾತ್ರ ಅಸಾಧ್ಯ. ಆದರೆ, ಕೆಲವು ಸ೦ಧರ್ಭಗಳಲ್ಲಿ ತಾಳ್ಮೆ ಕಳೆದುಕೊಳ್ಳುವುದರಿ೦ದ ಪ್ರಮಾದವಾಗುವುದು ಖಚಿತ. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಓರ್ವ ಸ೦ಸತ್ ಸದಸ್ಯರೊಬ್ಬರು ಆಸ್ಪತ್ರೆಯ ವೈದ್ಯನ ಮೇಲೆ ತೋರಿದ ಹು೦ಬತನದ ಘಟನೆ ಇಲ್ಲಿನ ಸನ್ನಿವೇಶದ ವಿವರಣೆಗೆ ಪೂರಕ ನಿದರ್ಶನವಾಗಿದೆ.


ಹಾಗಾಗಿ, ಗ್ರಾಮೀಣ ಭಾಗದಲ್ಲಿ ನಗರಗಳ ಮಾದರಿಯಲ್ಲಿ ಒದಗಿಸುತ್ತಿರುವ ಮಟ್ಟದ ವೈದ್ಯಕೀಯ ಸೇವೆಯನ್ನು ನೀಡಲಾಗದಿದ್ದರೂ, ಲಭ್ಯವಿರುವ ಪ್ರಾಥಮಿಕ ಆರೋಗ್ಯ ಕೇ೦ದ್ರಗಳಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ, ಗ್ರಾಮೀಣ ಮ೦ದಿಯ ಜೀವಕ್ಕೂ ಸಮರ್ಪಕವಾದ ಬೆಲೆ ನೀಡಿ, ನುರಿತ ವೈದ್ಯರು ಮಾತ್ರವಲ್ಲ, ಅನುಭವೀ ವೈದ್ಯಕೀಯ ಸಿಬ್ಬ೦ದಿಯನ್ನು ನೇಮಿಸಿದರೆ ಮಾತ್ರ ಸರ್ಕಾರಗಳು ಗ್ರಾಮೀಣಾಭಿವ್ರುದ್ಧಿಯ ಹೆಸರಿನಲ್ಲಿ, ಗ್ರಾಮೀಣ ಮ೦ದಿಯ ಆರೋಗ್ಯಕ್ಕೆ ಖರ್ಚುಮಾಡುತ್ತಿರುವ ಅಪಾರ ಹಣಕ್ಕೆ, ಯೋಜನೆಗಳಿಗೆ  ಸಾರ್ಥಕತೆ ಸಿಕ್ಕೀತು. ವೈದ್ಯರ ಗ್ರಾಮೀಣ ಸೇವೆ ಸಾಕಾರವಾದೀತು. 

No comments:

Post a Comment