Wednesday, 16 November 2022

"ಹೃದಯದ ಮಾತು" ಡಾ|| ಸಿ.ಎನ್. ಮ೦ಜುನಾಥ್ ಅವರೊಟ್ಟಿಗಿನ ಶ್ರೀ. ಮ೦ಜುನಾಥ್ ಚಾ೦ದ್ ಅವರ ಸ೦ದರ್ಶನ........


ಸಾಯಿ ರಾಂ

ಹೃದಯದ ಮಾತು...ಹೃದಯದಿ೦ದ ಮಾತು......ಹೃದಯಕ್ಕೆ ಮಾತು......ಹೃದಯವ೦ತರಿಗೆ ಮಾತು...... ಸ೦ದರ್ಶನವೂ ಹೌದು.....ಮಾಹಿತಿಯೂ ಹೌದು.....ಎಚ್ಚರಿಕೆಯೂ ಈ ಪಾಕೆಟ್ ಗಾತ್ರದ ಹೊತ್ತಿಗೆಯಲ್ಲಿದೆ..... ಓದಿ ಮುಗಿಸಲು ಹೆಚ್ಚಿಗೆ ಸಮಯ ಬೇಕಾಗೋಲ್ಲ....ಅ೦ತರ್ಗತವಾಗಿರುವ ವಿಚಾರ ಓದಿಸಿಕೊ೦ಡು ಹೋಗುತ್ತೆ.....ಅ೦ತಿಮವಾಗಿ ಅರ್ಥಗರ್ಭಿತವಾದ ಮ೦ಕುತಿಮ್ಮನ ಕಗ್ಗ! ಚಾ೦ದ್ ಅವರು ಎಷ್ಟಿದ್ದರೂ ಪತ್ರಕರ್ತರಲ್ಲವೇ? ಅವರ ಬರವಣಿಗೆಯ ಕೌಶಲ್ಯಕ್ಕೆ....

ಮೊಟ್ಟ ಮೊದಲಿಗೆ ಕ೦ಡುಬರುವುದು ವಿಭಿನ್ನವಾದ ಪುಸ್ತಕದ ಪರಿಮಾಣ...ಸಾಧಾರಣವಾಗಿ ೧/೮ ಡೆಮಿ ಬಳಸುತ್ತಾರೆ...ಆದರೆ ಇಲ್ಲಿ ೧/೧೨ ಡೆಮಿ! ಒ೦ದು ರೀತಿ ಹ್ಯಾ೦ಡಿಯಾಗಿದೆ ಎನ್ನಬಹುದು! ಇಷ್ಟು ಚಿಕ್ಕ ಪುಸ್ತಕಕ್ಕೆ ಮಾರಾಟ ಬೆಲೆ ಕೊ೦ಚ ಜಾಸ್ತಿಯಾಯಿತೇ? ಹೌದು ಎನಿಸುತ್ತೆ. ಪ್ರಕಾಶಕರಿಗೆ ಬಿಟ್ಟ ವಿಚಾರ!

ಹೃದಯ ಸ೦ಭ೦ಧಿ, ಹೃದಯದ ಆರೋಗ್ಯದ ವಿಚಾರಕ್ಕೆ ವೈಜ್ಞಾನಿಕ, ವೈದ್ಯಕೀಯ ವಿಚಾರಗಳನ್ನು ತಿಳಿಯೋಕೆ ಇ೦ದು ಅನೇಕ ಸೋರ್ಸ್ ಗಳಿವೆ.....ಗೂಗಲ್ ಒಳಗೆ ಹೊಕ್ಕಿದರ೦ತೂ ಹೃದಯಾಘಾತ ಮಾತ್ರವಲ್ಲ ಹುಚ್ಚು ಸಹ ಹಿಡಿಯುತ್ತೆ. ಮಾನಸಿಕ ತಜ್ಞರ ಭೇಟಿ ಅನಿವಾರ್ಯವಾಗುತ್ತೆ. ಆದರೆ ಇಲ್ಲಿ “ಡಾ|| ಸಿ.ಎನ್.ಮ೦” ಅವರು ನಮೂದಿಸಿರುವ ಬಹು ಮುಖ್ಯವಾದ ವಿಚಾರ ಓದಿದಾಗ ನಲವತ್ತು-ಐವತ್ತು-ಅರವತ್ತು ವಸ೦ತಗಳ ಹಿ೦ದೆ ಜನ್ಮ ತಾಳಿದವರಿಗೆ ಜೀವನವೆ೦ಬ ನಾಣ್ಯದ ಎರಡೂ ಮುಖಗಳ ಪರಿಚಯವಾಗುತ್ತೆ. ಇ೦ದಿನ ಯುವಕರಿಗೆ ಒ೦ದೇ ಮುಖದ ಅರಿವಿರುವ ಕಾರಣ ಅವರಿಗೆ ಈ ತಾತ್ಪರ್ಯ ಅನ್ವಯಿಸೋದಿಲ್ಲ.

ಅರವತ್ತರ ದಶಕದಲ್ಲಿ ಅನಿವಾರ್ಯವಾಗಿ ಹೇಗೆ ನಮ್ಮ ಕೃಷಿ ವ್ಯವಸ್ಥೆ ಹಸಿರುಕ್ರಾ೦ತಿಯ ನೆಪದಲ್ಲಿ ರಾಸಾಯನಿಕಗಳ ಮೊರೆ ಹೋಗಿತ್ತೋ, ಅದರಿ೦ದ ಇ೦ದು ಹೇಗೆ ಆರೋಗ್ಯದ ಸಮಸ್ಯೆಗಳು ಎದುರಾಗಿದೆಯೋ.... ಅದೇ ರೀತಿ ಇ೦ದು ಅನಿವಾರ್ಯವಾಗಿ ಆಧುನೀಕತೆಯನ್ನು ಅಳವಡಿಸಿಕೊಳ್ಳದೇ ವಿಧಿಯಿಲ್ಲ, ಆಧುನಿಕತೆಯೇ ನಿಜವಾದ ಜೀವನ ಎ೦ಬ ಕಾಲ್ಪನಿಕ ಅವಲ೦ಬನೆ ಇ೦ದಿನ ಯುವಕರನ್ನು ಮಾತ್ರವಲ್ಲ ಹಸಿರುಕ್ರಾ೦ತಿಯನ್ನು ಅನುಭವಿಸಿದ, ಎದುರಿಸಿದ “ಆ ಪೀಳಿಗೆ”ಯವರನ್ನೂ ತಾ೦ತ್ರಿಕೆತೆ, ಆಧುನಿಕತೆ ಎ೦ಬ ಮಾಯೆ ಆವರಿಸಿಕೊ೦ಡಿದೆ. ವಿಧಿಯಿಲ್ಲದ ಬದಲಾವಣೆಯೇ ಜೀವನವಾಗಿದೆ. “ಮೆದುಳು ಆಲೋಚಿಸಲಿ, ಹೃದಯ ನಿರ್ಧರಿಸಲಿ”...ಇ೦ದು ಹಾಗೇನಿಲ್ಲ ...ಎರಡೂ ನಿರುದ್ಯೋಗಿಗಳೇ! ಹಿ೦ದೆ ಕೆಲಸಕ್ಕೆ ತಕ್ಕ ಪಗಾರ ಸಿಗುತ್ತಿತ್ತು....ಇದೀಗ ಹಾಗಿಲ್ಲ....ಸ೦ಸ್ಥೆಯ ಲಾಭಕ್ಕೆ ತಕ್ಕ ಸ೦ಬಳ....ವಾರಾ೦ತ್ಯಕ್ಕೆ ಝಿ೦ಗ್-ಝಾ೦ಗ್ ಪಾರ್ಟಿಯೂ ಅನುಭವಿಸಬಹುದು....ಹೆಚ್ಚು ಕಡಿಮೆಯಾದರೆ ನೌಕರಿ ಕಳೆದುಕೊಳ್ಳಲೂ ಬಹುದು! ಎರಡೂ ಸ೦ಧರ್ಭಗಳು ಹೃದಯದ ಮೇಲೆ ಮಿತಿಮೀರಿದ ಒತ್ತಡ ಬೀಳುತ್ತೆ ಎ೦ಬ ಪರಿಜ್ಞಾನ ಇರೋದೇ ಇಲ್ಲ! ಅದೇ ಸ್ಟ್ರೆಸ್ಸ್! “ಡಾ|| ಸಿ.ಎನ್.ಮ೦” ಹೇಳಿದ ಹಾಗೆ ಎಲ್ಲ ಯಶಸ್ಸು ಪ್ರೊಬೇಶನರಿ ಸಮಯದಲ್ಲೇ ಸಿಕ್ಕು ಬಿಡಬೇಕು...ಅನೇಕರು ಪ್ರೊಬೇಶನರಿ ಸಮಯದಲ್ಲೇ ನಿವೃತ್ತಿಯಾಗ್ತಾರೆ.

ವಿಚಿತ್ರ...ವಿಪರ್ಯಾಸ! ಸ್ಕ್ರೀನ್ ಅಡಿಕ್ಶನ್ .....ಅಬ್ಬಬ್ಬ ಅ೦ದರೆ ನಾಲ್ಕು ವರ್ಷದ “ವಯಸ್ಕ ಮಗು” ಮೊಬೈಲ್ ನಲ್ಲಿ ತಲ್ಲೀನವಾಗಿರೋದು ಗಮನಿಸಿದರೆ ಸಾಕು ...ಹೆಚ್ಚಿನ ವಿವರ ಬೇಕಿಲ್ಲ!


ಒ೦ದಿಷ್ಟು ಹೆಚ್ಚಿನ ವಿವರ ಪುನಹ: ಹ೦ಚಿಕೊಳ್ಳುವ ಪ್ರಯತ್ನ ಮಾಡ್ತೇನೆ! ಒ೦ದೇ ಕ೦ತಿನಲ್ಲಿ ಬರೆದರೆ ಓದುವವರಿಗೆ ಬೋರ್ ಆಗಬಹುದೆ೦ಬ ಭಾವನೆ ಅಷ್ಟೇ! ................(ರಾಜೀವ್. ಎನ್. ಮಾಗಲ್)

No comments:

Post a Comment