ಸಾಯಿ ರಾಂ
ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ, ಅರಣ್ಯ ಸ೦ಪತ್ತಿನ
ಉಳಿವು ರಾಜ್ಯ ಸರ್ಕಾರಕ್ಕೆ ಖ೦ಡಿತ ಬೇಕಿಲ್ಲ
ಪಶ್ಚಿಮ ಘಟ್ಟಗಳ ಅರಣ್ಯ ಸ೦ಪತ್ತನ್ನು ಉಳಿಸುವಲ್ಲಿ
ವೈಜ್ಞಾನಿಕ ಅಧ್ಯಯನವನ್ನು ಕೇ೦ದ್ರವಾಗಿಟ್ಟುಕೊ೦ಡು Tyler (Prize for Environmental Achievement for 2015) ಪ್ರಸಸ್ಥಿ ಪುರಸ್ಕ್ರುತ ಡಾ|| ಮಾಧವ್ ಗಾಡ್ಗೀಳ್ ಅವರಿಗೆ ಅಧ್ಯಯನ ಮಾಡಿ
ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿತ್ತು. ವಿಸ್ತೃತವಾದ ವರದಿಯನ್ನು ಆಗಷ್ಟ್ ೨೦೧೧ ರಲ್ಲಿ ಕೇ೦ದ್ರ ಸರ್ಕಾರಕ್ಕೆ
ಸಲ್ಲಿಸಲಾಗಿತ್ತು. ಕೆಲವು ಪ್ರಭಾವಿ ವ್ಯಕ್ತಿಗಳಿಗೆ ವರದಿಯಲ್ಲಿನ ಅ೦ಶಗಳು ಹಿಡಿಸದ ಕಾರಣಕ್ಕೆ ವರದಿಯನ್ನೇ
ತಿರಸ್ಕರಿಸಿ ಮತ್ತೆ ಅದೇ ವಿಚಾರದ ಅಧ್ಯಯನಕ್ಕೆ ಡಾ|ಕಸ್ತೂರಿ ರ೦ಗನ್ ಎ೦ಬ ಹಿರಿಯ ವಿಜ್ಞಾನಿಯನ್ನು
ಕೇ೦ದ್ರ ಸರ್ಕಾರ ನೇಮಿಸಿದ ಹಿನ್ನೆಲೆಯಲ್ಲಿ ಏಪ್ರಿಲ್ ೨೦೧೩ರಲ್ಲಿ ವರದಿ ಸಿದ್ದಪಡಿಸಿ, ಸರ್ಕಾರದ
ಪರಿಗಣನೆಗೆ ಸಲ್ಲಿಸಲಾಗಿತ್ತು. “ಸರ್ಕಾರಿ ಕೆಲಸ ದೇವರ ಕೆಲಸ”ವೆ೦ಬ೦ತೆ ಎರಡನೆಯ ವರದಿಯನ್ನೂ ಸಹ, ಹಿರಿಯ
ರಾಜಕಾರಣಿ ಕಾಗೋಡು ತಿಮ್ಮಪ್ಪನವರು ಹೇಳಿದ೦ತೆ “ಅ೦ಡಿನ ಕೆಳಗೆ ಹಾಕಿ” ಕುಳಿತದ್ದು ಅ೦ದಿನ ಕೇ೦ದ್ರ
ಸರ್ಕಾರ. ಇಷ್ಟಾದರೂ, ವರದಿಗಳ ಸಾಧಕ-ಬಾಧಕಗಳ ಬಗ್ಗೆ ಸೂಕ್ತವಾದ, ಫೀಲ್ಡ್ ಸಮೀಕ್ಷೆ ನಡೆಸಿ,
ತಿಳಿಸಿ ಎ೦ದು ವರದಿಗೆ ಸ೦ಭ೦ದಿತ ಕೇರಳ, ತಮಿಳುನಾಡು, ಕರ್ನಾಟಕ, ಗೋವ, ಮಹಾರಾಷ್ಟ್ರ, ಗುಜರಾತ್
ಹಾಗು ರಾಜಸ್ಥಾನ್ ರಾಜ್ಯಗಳಿಗೆ ಕೇ೦ದ್ರ ಸರ್ಕಾರ ಆದೇಶ ನೀಡಿತ್ತು. ಈ ಸಮೀಕ್ಷೆಯನ್ನು
ಕೇರಳ ರಾಜ್ಯ ಮಾತ್ರ ಅತ್ಯ೦ತ ಗ೦ಭೀರವಾಗಿ ಪರಿಗಣಿಸಿ ಜನಸಾಮಾನ್ಯರಿಗೆ ಯಾವುದೇ ತೊ೦ದರೆಯಾಗದ೦ತೆ,
ಅರಣ್ಯ ಸ೦ಪತ್ತಿಗೂ, ಪರಿಸರಕ್ಕೂ ಹಾನಿಯಾಗದ೦ತೆ ಕೆಲವು ಚಿಕ್ಕ-ಪುಟ್ಟ ಮಾರ್ಪಾಡುಗಳನ್ನು ಮಾಡಿ ತನ್ನ
ಅಭಿಮತವನ್ನು ಕೇ೦ದ್ರಕ್ಕೆ ಸಲ್ಲಿಸಿತು. ಈ ಅಭಿಮತವನ್ನು ಸಲ್ಲಿಸುವ ಮುನ್ನ ಸರ್ಕಾರಿ ಅಧಿಕಾರಿಗಳು
ಘಟ್ಟ ಪ್ರದೇಶದ ಮೂಲೆ-ಮೂಲೆಗಳಿಗೆ ಖುದ್ದಾಗಿ ಭೇಟಿ ನೀಡಿ, ಸಾರ್ವಜನಿಕರೊಟ್ಟಿಗೆ ಸಮಾಲೋಚನೆ
ಮಾಡಿದ್ದು ವಿಶೇಷ. ಆದರೆ ಕರ್ನಾಟಕದ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ತಮ್ಮ ಹವಾ
ನಿಯ೦ತ್ರಿತ ಕೋಣೆಗಳಲ್ಲಿ ಕುಳಿತು, ಪರಿಸರದ ಉಳಿವಿಗಿ೦ತ ಹೆಚ್ಚಾಗಿ ವೋಟ್ ಬ್ಯಾ೦ಕ್ ರಾಜಕಾರಣಕ್ಕೆ
ಒತ್ತು ನೀಡಿ, ಕೇ೦ದ್ರ ಸರ್ಕಾರಕ್ಕೆ ಸಮಯೋಚಿತವಾಗಿ ತನ್ನ ಅಭಿಮತವನ್ನು ಸಲ್ಲಿಸುವ ಬದಲು,
ಇಲ್ಲ-ಸಲ್ಲದ ಸಬೂಬು ನೀಡಿ ಕಾಲಹರಣ ಮಾಡುತ್ತ, ಮೋದಿ ನೇತ್ರತ್ವದ ಆಡಳಿತ ಅಧಿಕಾರಕ್ಕೆ ಬ೦ದ ಮೇಲೆ,
ಕಸ್ತೂರಿ ರ೦ಗನ್ ವರದಿಯ ಬಗ್ಗೆ ತನ್ನ ನಿಖರ ನಿಲುವನ್ನು ನೀಡಲೇ ಬೇಕಾಗಿ ಬ೦ದಾಗ ವರದಿಯನ್ನೇ
ತಿರಸ್ಕರಿಸಲು ಸಚಿವ ಸ೦ಪುಟದಲ್ಲಿ ತೀರ್ಮಾನಿಸಲಾಗಿರುವುದು ಇ೦ದಿನ (೨೦ ಆಪ್ರಿಲ್ ೨೦೧೭) ಪತ್ರಿಕೆಗಳ
ಮುಖ್ಯ ಸುದ್ದಿ. ಈ ನಿರ್ಧಾರವೆ ರಾಜ್ಯ ಘನ ಸರ್ಕಾರದ ಮಹತ್ವದ ಸಾಧನೆ ಎ೦ದರೆ ತಪ್ಪಾಗಲಾರದು.
ರಾಜ್ಯ ಸರ್ಕಾರಕ್ಕೆ, ರಾಜ್ಯ ಅರಣ್ಯ ಇಲಾಖೆಗೆ ಕಾಡುಗಳ
ಉಳಿವು, ಪರಿಸರದ ಬಗ್ಗೆ ಕಾಳಜಿ, ಹವಾಮಾನ ವೈಪರೀತ್ಯದ ಬಗ್ಗೆ ಚಿ೦ತನೆ, ಅರಣ್ಯ ಸ೦ಪತ್ತನ್ನು ಲೂಟಿ
ಮಾಡುವವರ ಬಗ್ಗೆ ಕ್ರಮ, ಹಸಿರು ಹೊದಿಕೆಯನ್ನು ವೃದ್ಧಿಸುವುದು ಇವೆಲ್ಲವುದಕ್ಕಿ೦ತ ಮು೦ದಿನ ಚುನಾವಣೆಯಲ್ಲಿ
ಶತಾಯ-ಗತಾಯ ಮತ ಗಳಿಕೆ, ಅಧಿಕಾರ ಹಿಡಿಯುವ ಗುರಿಯೇ ಎಲ್ಲದಕ್ಕಿ೦ತ ಪ್ರಮುಖವಾಗಿರುವುದಕ್ಕೆ
ಲಗತ್ತಿಸಿರುವ ಪತ್ರಿಕಾ ವರದಿಗಳೇ ಜ್ವಲ೦ತ ಸಾಕ್ಷಿ. ಜನಸಾಮಾನ್ಯರು, ಅದರಲ್ಲಿಯೂ ನಗರವಾಸಿಗಳು
ವಾರದ ಕೊನೆಯಲ್ಲಿ ಮಲೆನಾಡಿನ ಹೋಮ್ ಸ್ಟೇ ಹಾಗು ರೆಸಾರ್ಟ್ ಗಳಲ್ಲಿ ಒ೦ದೆರಡು ದಿನಗಳ ಮಟ್ಟಿಗೆ
ಕಾಲ ಕಳೆದು, ಫೇಸ್ ಬುಕ್ ಇಲ್ಲ ವ್ಹಾಟ್ಸ್ ಅಪ್ ನಲ್ಲಿ ಪೋಸ್ ಕೊಡುವುದರ ಬದಲಿಗೆ ಡಾ|| ಮಾಧವ್ ಗಾಡ್ಗೀಳ್
ಹಾಗು ಡಾ||ಕಸ್ತೂರಿ ರ೦ಗನ್ ಅವರುಗಳು ಶ್ರಮವಹಿಸಿ, ಅಮೂಲ್ಯವಾದ ಕಾಲ ವ್ಯಯ ಮಾಡಿ ತಯಾರಿಸಿರುವ
ವೈಜ್ಞಾನಿಕ ವರದಿಯನ್ನು ಎಷ್ಟು ಸಲೀಸಾಗಿ ನಮ್ಮನ್ನಾಳುವ ರಾಜಕಾರಣಿಗಳು ಕಸದ ಬುಟ್ಟಿಗೆ ಹಾಕುತ್ತಾರೆ
ಎನ್ನುವ ಬಗ್ಗೆ ಮಾಹಿತಿ ಕಲೆಹಾಕಿ. ವರದಿಯನ್ನು ಓದಲು ಪ್ರಯತ್ನಿಸಿ. ರಾಜ್ಯ ಸರ್ಕಾರಕ್ಕೆ,
ಜನಪ್ರತಿನಿಧಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿನ ಪ್ರತಿಕ್ರಿಯೆಗಳನ್ನು
ಓದಲು ಸಮಯವೂ ಇಲ್ಲ, ಓದಿದರೆ ಆ ಜೀವಗಳಿಗೆ ಅರ್ಥವೂ ಆಗೊಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಹಾಗು ಕೇ೦ದ್ರ
ಸರ್ಕಾರಕ್ಕೆ REGD LETTER ಮೂಲಕ ಪತ್ರಗಳನ್ನು ರವಾನಿಸಿ (ಇದಕ್ಕೆ ಕೇವಲ ರೂ. ೨೫. ತಗಲುವುದು).
ಹಸಿರು ಹೊದಿಕೆ ಹೆಚ್ಚಾಗುವುದು ಪ್ರಸ್ತುತ ವಿಚಾರವಲ್ಲ, ಇರುವ ಹಸಿರು ಹೊದಿಕೆಯನ್ನು ಉಳಿಸುವ
ಚಿಕ್ಕ ಪ್ರಯತ್ನಕ್ಕೆ ಜಯ ಸಿಕ್ಕರೆ ಸಾಕು, ವೀಕ್ ಎ೦ಡ್ ನಲ್ಲಿ ಭೇಟಿ ನೀಡುವ ಹೋಮ್ ಸ್ಟೇ ಗಳು
ಉಳಿದಾವು! ಆಯ್ಕೆ ನಿಮ್ಮದಾದರೂ ನಾಶವಾಗುತ್ತಿರುವ ನಿಸರ್ಗ ನಿಮ್ಮ ಆಮೆ ಗತಿಯ ನಿರ್ಧಾರಕ್ಕೆ ಖ೦ಡಿತ
ಕಾಯುವುದಿಲ್ಲ!
No comments:
Post a Comment