ಸಾಯಿ ರಾಂ
ಈ ಒಂದು ಲೇಖನ ಸಾಕು ಅರಣ್ಯ ಇಲಾಖೆಯಲ್ಲಿನ ಬ್ರಹ್ಮಾಂಡ ಭೃಷ್ಟಾಚಾರದ ಬಗ್ಗೆ ತಿಳಿಯೋಕೆ. ಅರಣ್ಯ ಭಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರವೂ ಇದೆ ಎಂದ ಮೇಲೆ ರಾಜಕಾರಣಿಗಳ ಪಾತ್ರ ಇರದೇ ಹೋಗಲು ಸಾಧ್ಯವೇ? ಇನ್ನು ಅಧಿಕಾರಿಗಳು ಒಂದು ರೀತಿ Facilitator ಗಳಾಗಿ ಕಾಯಕ ಮಾಡುತ್ತಲೇ ಇರ್ತಾರೆ! ಅರಣ್ಯ ಸಂಪತ್ತಿನ ಲೂಟಿ ಇಂದಿಗೂ ಅವ್ಯಾಹಿತವಾಗಿ ಜಾರಿಯಲ್ಲಿದೆ. ತಾಕತ್ ಇರುವವರು ತಪ್ಪಿಸಿಕೊಳ್ತಾರೆ.... ಸ್ವಲ್ಪ ವೀಕ್ ಅನಿಸಿಕೊಂಡವರು ಸಿಕ್ಕಿಹಾಕಿ ಕೊಳ್ತಾರೆ... ಪಾಪದ ಪ್ರಾಣಿಗಳು! ೨೦೧೨ರ ಸಮಯದಲ್ಲಿ ಹಾಸನ ಜಿಲ್ಲೆಯ ಆಲೂರು ತಾಲೂಕಿನ ವಾಟೇಪುರ ಎಂಬ ಪುಟ್ಟ ಗ್ರಾಮದಲ್ಲಿ ಕಾಫಿ ತೋಟದ ಬೇಲಿಗೆ ನೇರವಾಗಿ ವಿದ್ಯುತ್ ಸಂಪರ್ಕ ಕೊಟ್ಟ ಕಾರಣಕ್ಕೆ ಮರಿ ಆನೆಯೊಂದು ಸಾವನ್ನಪ್ಪಿತ್ತು... ಈ ದುರ್ಘಟನೆಯನ್ನು ವಿರೋಧಿಸಿದ ತಾಯಿ ಆನೆಯ ಆಕ್ರಂದನ - ಆರ್ಭಟ ಎರಡು ದಿನಗಳ ವರೆಗೆ ಕಾರ್ಯಾಚರಣೆಗೆ ಬಂದಿದ್ದ ಯಂತ್ರವನ್ನು (ಜೆ.ಸಿ,ಬಿ) ಸಹ ಬುಡಮೇಲು ಮಾಡಿತ್ತು .... ರಾಜಕಾರಣಿಯೋರ್ವರ ಹಸ್ತಕ್ಷೇಪದಿಂದ ಪ್ರಕರಣ ಇತ್ಯರ್ಥವಾಗಿತ್ತು.... ತಪಿತಸ್ಥ ಬಚಾವ್ ಆಗಿದ್ದ.... ಈ ಬಚಾವ್ ಕಾರ್ಯಾಚರಣೆಯ ಹಿಂದಿನ ಡೀಲ್ ಬಗ್ಗೆ ಕೆಲವರಿಗೆ ಮಾತ್ರ ಮಾಹಿತಿ ಇದೆ.. ನಮ್ಮಲ್ಲಿ ಚಿಣ್ಣಪ್ಪನವರಂತಹ ವ್ಯಕ್ತಿಗಳು ಇನ್ನೂ ಅನೇಕರಿರಬಹುದು... ಆದರೆ ಕಳ್ಳಪ್ಪಗಳ ಹಾವಳಿಯಿಂದ ಅವರು ಮೌನವಾಗಿದ್ದಾರೆ, ಅಶಕ್ತರಾಗಿದ್ದಾರೆ ... ಅವರ ನಡವಳಿಕೆ ಅನಿವಾರ್ಯ ಕೂಡ! ಹೆಚ್ಚು ಮುತುವರ್ಜಿ ತೋರಿದರೆ ಅವರಿಗೂ ಆ ಮರಿ ಆನೆಯ ಗತಿಯೇ! ಇದು ನಮ್ಮ ಸಮಾಜದ ಹಣೇ ಬರಹ!



No comments:
Post a Comment