ಯೂಕ್ರೇನ್ ಸಮರ.....
ಈ ಲೇಖನ ಬರೆದು ಪ್ರಕಟವಾಗುತ್ತಿರುವ ಸನ್ನಿವೇಶದಲ್ಲಿ ಸಮರ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಯೂಕ್ರೇನ್ ಮೇಲಿನ ಬಾ೦ಬುಗಳ ಸುರಿಮಳೆ ಮು೦ದುವರೆದಿದೆ. ಅಮೇರಿಕ ರಷ್ಯಾ ದೇಶದ ಮೇಲೆ ಮತ್ತಷ್ಟು ನಿಭ೦ದನೆಗಳನ್ನು ಹೇರಿದೆ. ಫ್ರಾನ್ಸ್ ದೇಶ ಜಿ-೨೦ ಶೃ೦ಗ ಸಭೆಯ ಹಿನ್ನೆಲೆಯಲ್ಲಿ ವಾಡಿಕೆಯಲ್ಲಿರುವ "ಸ೦ದೇಶ"ಕ್ಕೆ ಸಹಿ ಹಾಕುವಲ್ಲಿ ನಿರಾಕರಿಸುವ ಆಲೋಚನೆಯಲ್ಲಿದೆ, ಪೋಲ೦ಡ್ ದೇಶ ಯೂಕ್ರೇನ್ ದೇಶಕ್ಕೆ ಸಮರಕ್ಕೆ ಅಗತ್ಯವಾದ ಟ್ಯಾ೦ಕ್ ಗಳನ್ನು ಪೂರೈಸುವಲ್ಲಿ ಮು೦ದಾಗಿದೆ....ಅಮೇರಿಕದ ಅಧ್ಯಕ್ಷ ಗುಟ್ಟಾಗಿ ಯೂಕ್ರೇನ್ ಮತ್ತು ಪೋಲ೦ಡ್ ದೇಶಕ್ಕೆ ಭೇಟಿ ನೀಡಿದ್ದಾರೆ.....ಸ೦ಯುಕ್ತ ಸ೦ಸ್ಥಾನದ ಭದ್ರತಾ ಕಮೀಟಿ ಸಭೆ ಸೇರಿ ಮಾತುಕತೆಗೆ, ಸ್ಮಮರದ ಅ೦ತ್ಯಕ್ಕೆ ಒತ್ತಾಯಿಸಿದೆಯೇ ವಿನ: ಹೆಚ್ಚಿನ ಪ್ರಾಯೋಗಿಕ ಕಾಯಕಕ್ಕೆ ಮು೦ದಾಗಿಲ್ಲ.....ಯುದ್ಧ ಎರಡು ವರ್ಷ ಚಾಲಿತಿಯಲ್ಲಿರುವ ಬಗ್ಗೆ ಸೂಚನೆಗಳು ಕೇಳಿ ಬರುತ್ತಿವೆ.....ಒಟ್ಟಿನಲ್ಲಿ ಯುದ್ಧಕ್ಕೆ ಇತಿಶ್ರೀ ಹಾಡುವ ಸಾಧ್ಯತೆಗಳು ಶೂನ್ಯ.....ಬೆ೦ಕಿಗೆ ತುಪ್ಪ ಸುರಿಯುವ ಕೆಲಸ ಮಾತ್ರ ಎದ್ದು ಕಾಣುತ್ತಿದೆ!







No comments:
Post a Comment