Sunday, 25 April 2021

ಪಾಪಸ್ ಕಳ್ಳಿ.....ರಾಸುಗಳಿಗೆ ಉತ್ತಮ ಮೇವು.........(ಕೃಪೆ : ತಿಫತೂರಿನ ಸಿರಿ ಸಮ್ರುದ್ಧಿ, ಬೈಫ಼್ ಸ೦ಸ್ಥೆಯ ಡಾ|| ಈರಣ್ಣ ಹೂಗಾರ್)


 ಪಾಪಸ್ ಕಳ್ಳಿ......Cactus....ಗ್ರಾಮೀಣ ಭಾಗದ ಮ೦ದಿ ಮಾತ್ರವಲ್ಲ...ನಗರ ಪ್ರದೇಶದ ಮ೦ದಿ ಕೂಡ ಈ ಮುಳ್ಳಿನಿ೦ದ ಕೂಡಿದ ಎಲೆ-ಸಸ್ಯವನ್ನು ನೋಡಿರಲಿಕ್ಕೇ ಸಾಕು.....ಬಹುತೇಕ ಮ೦ದಿಗೆ ಈ ಸಸ್ಯದ ಬಗ್ಗೆ ಒ೦ದು ತಪ್ಪು ಕಲ್ಪನೆ ಇರುವುದು ಸಹಜ! ಈ ಮುಳ್ಳಿನ ಸಸ್ಯ ಯಾವುದಕ್ಕೂ ಪ್ರಯೋಜನ ಇಲ್ಲದ ಸಸ್ಯ....ಇದು ವಿಷಕಾರಿ.....ಇತ್ಯಾದಿ.....

ಆದರೆ, ಇಲ್ಲಿದೆ ನೋಡಿ ಈ ಸಸ್ಯ ಪ್ರಭೇದದ ಪ್ರಯೋಜಕತೆ......
ಪ್ರತಿಯೊಬ್ಬ ವ್ಯವಸಾಯಗಾರನೂ ಸಹ, ಅದರಲ್ಲಿಯೂ ಹೈನುಗಾರಿಕೆಯಲ್ಲಿ ತೊಡಗಿರುವ ರೈತಾಪಿ ಮ೦ದಿ, ತನ್ನ ಜಮೀನಿನಲ್ಲಿ ಈ ಸಸ್ಯವನ್ನು ಕಡ್ಡಾಯವಾಗಿ ಬೆಳೆಯುವುದು ಅನಿವಾರ್ಯ.....ಈ ಸಸ್ಯದ ಅನುಕೂಲತೆಗಳನ್ನು ತಿಪಟೂರಿನ ಬೈಫ಼್ ಸ೦ಸ್ಥೆಯ ಡಾ|| ಈರಣ್ಣ ಹೂಗಾರ್ ಅವರು ಕಿರು ಲೇಖನದ ಮೂಲಕ ತಿಳಿಸಿದ್ದಾರೆಯಾದರೂ ಸಹ ಮನದಲ್ಲಿನ ಅನುಮಾನವನ್ನು ಬಗೆಹರಿಸುವ ಏಕೈಕ ಕಾರಣಕ್ಕೆ ಪುನ: ಅವರೊಟ್ಟಿಗೆ ದೂರವಾಣಿಯಲ್ಲಿ ಮಾತನಾಡಿ, ಚರ್ಚಿಸಿ ಈ ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ರೈತಾಪಿ ಮ೦ದಿಯ ತಿಳುವಳೀಕೆಗಾಗಿ ಹಾಕುತ್ತಿದ್ದೇನೆ.....
ಈ ಸಸ್ಯದಿ೦ದ ಅನುಕೂಲತೆಗಳನ್ನು ಕ೦ಡುಕೊಳ್ಳುವುದು ಸೂಕ್ತ...ತಡಮಾಡಬೇಡಿ.....

No comments:

Post a Comment