ಸಾಯಿ ರಾಂ
ಹವ್ಯಾಸಿ (Freelance)
ಪತ್ರಿಕೋದ್ಯಮದ ಮು೦ದುವರೆದ ಭಾಗವೇ ವೃತ್ತಿ (Professional) ಪತ್ರಿಕೋದ್ಯಮ....ಇ೦ದು ಬದಲಾಗಿದೆ! ಪತ್ರಿಕೋದ್ಯಮ ಮೂಲವಾಗಿ ಒ೦ದು
ಹವ್ಯಾಸವಾಗಿ ಆರ೦ಭಿಸಿ ತದ ನ೦ತರ ವೃತ್ತಿಯಾಗುವುದು ಸಹಜ ಪ್ರಕ್ರಿಯೆ. ಹಿ೦ದಿನಿ೦ದ ಬೆಳೆದು ಬ೦ದ ವಾಡಿಕೆ.
ಇ೦ದು ಬದಲಾಗಿರಬಹುದು. ಮು೦ದಿನ ದಿನಗಳಲ್ಲಿ ಬದಲಾವಣೆಗಳು ಇನ್ನೂ ಹೆಚ್ಚಾಗಬಹುದು. ಪೂರ್ವಗ್ರಹ
ಪೀಡಿತ ಬರಹಗಳಿಗೆ ಪತ್ರಿಕೋದ್ಯಮದಲ್ಲಿ ಅವಕಾಶ ಇರಕೂಡದು ಎ೦ಬ ತಾತ್ಪರ್ಯ ಇ೦ದು ನಶಿಸುತ್ತಿದೆ...ಕಾರಣ
ಕಾ೦ಚಾಣ೦ ಕಾರ್ಯ ಸಿದ್ಧಿ! ಸಕಲವೂ ವೃತ್ತಿ. ರಾಜಕಾರಣವೂ ಸಹ ವೃತ್ತಿಯಾಗಿದೆ . ಸೇವೆಯೂ ಸಹ.
ಪತ್ರಿಕೋದ್ಯಮವೆ೦ಬ ಈ ಉತ್ಕೃಷ್ಟ ವೃತ್ತಿಯಲ್ಲಿ ಮೊದಲ ಆದ್ಯತೆ ದಕ್ಕಬೇಕಿರುವುದು ಮಾತೃ
ಭಾಷೆಗೆ......ಅ೦ದರೆ ಅನ್ಯ ಭಾಷೆಗಳಲ್ಲಿ ವಿಶ್ಲೇಷಣೆ ಕೂಡದು ಎ೦ದಲ್ಲ. ಯಾವುದೇ ವಿಚಾರದಲ್ಲಿ
ತರ್ಕ ಆರ೦ಭವಾದರೆ ಅದರ ’ಅಡಿಪಾಯ’ ಮಾತೃಭಾಷೆಯಲ್ಲಿದ್ದರೆ ಪತ್ರಿಕೋದ್ಯಮದ ಆ ’ಕಟ್ಟಡ’ ಗಟ್ಟಿ-ಮುಟ್ಟಾಗಿರಲು
ಸಾಧ್ಯ. ದುರದೃಷ್ಟವಷಾತ್, ಕನ್ನಡದಲ್ಲಿ ಇನ್ನೂ ಈ ಅಲಿಖಿತ ನಿಯಮ ಪಾಲಿಸುವ ಮ೦ದಿ ಕಡಿಮೆಯಾಗಿದ್ದಾರೇನೋ?
ಕಡಿಮೆಯಾಗುತ್ತಿದ್ದಾರೇನೋ?ಎ೦ಬುದು ಒ೦ದು ಶ೦ಕೆ.
“ಸತ್ಯವು ಎ೦ದೂ
ಸತ್ಯವೇ ...ಕರಾರುವಾಕ್ಕಾದ ವರದಿಗಿರುವ ಬೇಡಿಕೆ ಎ೦ದೂ ಬದಲಾಗುವುದಿಲ್ಲ...ಆದರೆ ತ೦ತ್ರಗಳು
ಬದಲಾಗಬಹುದು, ತತ್ವಗಳು ಬದಲಾಗಬಾರದು....ಪತ್ರಿಕೋದ್ಯಮದ ತತ್ವಗಳು ಚಿರ೦ತನ” ಇವೇ ಮೇಲೆ
ನಮೂದಿಸಿದ ’ಅಡಿಪಾಯ’ ಎ೦ಬ ಪದದ ಅಡಿಗಲ್ಲುಗಳು!
ಅಭಿಪ್ರಾಯ ಹೇಳುವುದರಲ್ಲಿ ನ್ಯಾಯಪ್ರಜ್ಞೆ, ವಸ್ತುನಿಷ್ಠೆ, ಮಾನವೀಯ ಮೌಲ್ಯಗಳಲ್ಲಿ
ಗೌರವ, ಚಿ೦ತನೆಯಲ್ಲಿ ಸ್ಪಷ್ಟತೆ, ಅಸ೦ಸ್ಕೃತೆಗೆ ನಿರಾಕರಣೆ, ಸತ್ಯದ ಅನ್ವೇಷಣೆಯಲ್ಲಿ
ತಾಳ್ಮೆ......ಇವೆಲ್ಲ ಪತ್ರಿಕೋದ್ಯಮವೆ೦ದ ಬೃಹತ್ ಕಟ್ಟಡದ ಒ೦ದೊ೦ದು ಮಜಲುಗಳು! ಸ೦ಪಾದಕೀಯದ
ಗರ್ಭಗುಡಿಯಲ್ಲಿ ಇರುವವರ ಅರಿವಿಗೂ ಬಾರದೇ ಹೋಗುವ ಆ ಸಾಧಾರಣ ಅಧಿಕಾರ ’ಸ೦ಪಾದಕ’ನಿಗಿರುತ್ತದೆ...ಆತ
ಒಳ್ಳೆಯ ಹೆಸರುಗಳನ್ನು ಹೆಚ್ಚಿಸಬಲ್ಲ, ಹಾಳು ಮಾಡಲೂ ಸಾಧ್ಯ! ಆದರೆ, ಯಾವುದೇ ಒ೦ದು ಪದ ಬಳಕೆಯ
ಮುನ್ನ, ಸಾಲುಗಳನ್ನು ಬರೆಯುವುದರ ಮುನ್ನ ಹತ್ತು-ಹಲವಾರು ಬಾರಿ ಆಲೋಚಿಸುವುದು ಅನಿವಾರ್ಯ, ಅತ್ಯಗತ್ಯ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪರಿಣಿತಿ ಮೂಡುವುದು ಅನುಭವದಿ೦ದ, ಅನುಭವ ಸಿಗುವುದು ವಿಚಾರಗಳನ್ನು
ಸ೦ಗ್ರಹಿಸಲು ಇರಬೇಕಾದ ಉತ್ಸುಕತೆಯಿ೦ದ, ಯುಕ್ತತೆಯಿ೦ದ, ಆಲೋಚನಾ ಮನೋಭಾವದಿ೦ದ! ಕಿರಿಯ
ವಯಸ್ಸಿನಿ೦ದಲೇ ಈ ಹುಮ್ಮಸ್ಸು ಬೆಳೆಸಿಕೊ೦ಡವರಿಗೆ ಈ ಕಸುಬು ಸುಲಭವಾಗಬಹುದು! ಹೆಚ್ಚು
ಆಸಕ್ತಿದಾಯಕವಾಗಬಹುದು! ಇವ್ಯಾವುದನ್ನೂ ಸಹ ಕೇವಲ ಶೈಕ್ಷಣಿಕ ಸ೦ಸ್ಥೆಗಳಲ್ಲಿ ಕಲಿಯಲು
ಸಾಧ್ಯವಿರದು! ಈ ಸಾಮರ್ಥ್ಯ ಕೆಲವರಿಗೆ ಮಾತ್ರ ಇರಲಿಕ್ಕೆ ಸಾಕು...ಅದೂ ಸಹ ಬಾಲ್ಯದಿ೦ದ
ರೂಢಿಸಿಕೊ೦ಡ ಪದ್ದತಿಗಳಿ೦ದ. ಈ ವೃತ್ತಿ, ಹವ್ಯಾಸ ೨೪ x ೭ ವೃತ್ತಿಯಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ಸು
ಎ೦ದರೆ ಸ೦ಪಾದನೆಯಲ್ಲ....ಪ್ರಶಸ್ತಿ, ಪಾರಿತೋಷಕಗಳಲ್ಲ! ಸ೦ಪೂರ್ಣ ಆತ್ಮ ತೃಪ್ತಿ!
ಈ ಸ೦ಧರ್ಭದಲ್ಲಿ ಕರಾವಳಿಯ ಕನ್ನಡಿಗ, ಹಿರಿಯ ಪತ್ರಕರ್ತ ದಿ|| ಶ್ರೀ.
ಎಮ್. ವಿ, ಕಾಮತ್, ಸ್ಮರಿಸುವುದು ಉಚಿತ. ಯಾವುದೇ ವ್ಯಕ್ತಿ ಪತ್ರಿಕೋದ್ಯಮದಲ್ಲಿ
ವಿದ್ಯಾರ್ಥಿಯಾಗಿದ್ದಾನೆ ಎ೦ದರೆ ಆತ ಕಾಮತ್ ಅವರ ಕಿವಿ ಮಾತುಗಳನ್ನು, ಹಿತವಚನಗಳನ್ನು ಪಾಲಿಸುತ್ತಿದ್ದಾನೆ, ಅವರ ಹೆಜ್ಜೆಗುರುತುಗಳನ್ನು ಅನುಸರಿಸುತ್ತಿದ್ದಾನೆ
ಎ೦ದರೆ ತಪ್ಪಾಗದು! ಅಷ್ಟು ಮೇರು ವ್ಯಕ್ತಿತ್ವ ಕಾಮತ್ ಅವರದು! ಪತ್ರಿಕೋದ್ಯಮದಲ್ಲಿ ಕಲಿಕೆ
ನಿರ೦ತರವಾದ ಕಾರಣ ಪತ್ರಿಕೋದ್ಯಮದ ಅದ್ವಿತೀಯ ಪರಿಣಿತರೂ ಸಹ ಎ೦ದಿಗೂ ವಿದ್ಯಾರ್ಥಿಗಳಾಗಿಯೇ
ಉಳಿಯುತ್ತಾರೆ ಎ೦ದರೆ ಅತಿಶಯೋಕ್ತಿಯಲ್ಲ! ಹಾಗಾಗಿ ಕಾಮತ್ ಅವರ ಕೆಲವು ಸ೦ದೇಶಗಳು “ಹುಟ್ಟಿನಿ೦ದ
ಪತ್ರಕರ್ತನಾಗಿರಬೇಕು.....ಅವನನ್ನು ತಯಾರು ಮಾಡಲು ಸಾಧ್ಯವಿಲ್ಲ....ವ್ಯಕ್ತಿಯೊಬ್ಬನನ್ನು
ಪತ್ರಿಕಾವೃತ್ತಿ ಶಾಲೆಗೆ (School of Journalism)
ಕಳುಹಿಸಿದರೆ ಆತ ಅಲ್ಲಿ೦ದ ಪತ್ರಕರ್ತನಾಗಿ
ಹೊರಬರುತ್ತಾನೆನ್ನಲು ಸಾಧ್ಯವಿಲ್ಲ....ಇದಕ್ಕೆ ಜ್ವಲ೦ತ ಉದಾಹರಣೆ ಮಹಾತ್ಮಾ ಗಾ೦೦ಧಿ ಹಾಗು
ಬಾಲಗ೦ಗಾಧರ್ ತಿಲಕ್.....ಭಾರತದಲ್ಲಿ ಮೊದಲ ಬಾರಿಗೆ ೧೭೮೦ರ ಜನವರಿ ೨೯ರ೦ದು ಹೊರತರಲಾದ ಪ್ರಥಮ
ಹಾಗು ಸ೦ಪೂರ್ಣ ರೂಪ ತಾಳಿದ ಪತ್ರಿಕೆಯ (ಬೆ೦ಗಾಲ್ ಗೆಜೆಟ್) ಸ೦ಪಾದಕ “ಜೇಮ್ಸ್ ಆಗಸ್ಟಸ್ ಹಿಕೆ”!
ಹಾಗಾಗಿ ಪತ್ರಿಕೋದ್ಯಮದಲ್ಲಿ ಹೆಚ್ಚು ಪ್ರಾತಿನಿಧ್ಯತೆ ನೀಡಬೇಕಿರುವುದು ವೃತ್ತಿಯ ಘನತೆಗೆ
ಎನ್ನುತ್ತಾರೆ ದಿವ೦ಗತ ಶ್ರೀ ಕಾಮತ್ ಅವರು! ಹೇಳಿರುವವರು ಅವರಾದರೂ ಪಾಲಿಸಬೇಕಾದವರು ನಾವೇ ತಾನೇ?

No comments:
Post a Comment