ಸುಮಾರು ಮೂರ್ನಾಲ್ಕು ದಶಕಗಳ ಹಿ೦ದೆ, ಹಲ್ಲು ಕೀಳಲು.... ಹಲ್ಲು ನೋವಿಗೆ, ಕಿವಿ ಸಮಸ್ಯೆಗೆ, ಮಹಿಳೆಯರ ಬಹುತೇಕ ಸಮಸ್ಯೆಗಳಿಗೆ ಹೆರಿಗೆಯನ್ನೂ ಹೊರತುಪಡಿಸದೇ ,ಮಕ್ಕಳ ಆರೋಗ್ಯ, ಪುರುಷರು, ವಯಸ್ಕರು.....ಹೀಗೆ ಅನೇಕಾನೇಕ ಸಮಸ್ಯೆಗಳಿಗೆ ಏಕ ವೈದ್ಯ ಪದ್ದತಿ ಜಾರಿಯಲ್ಲಿತ್ತು. ಮಾತ್ರವಲ್ಲ, ಇ೦ದಿನ ಹಾಗೆ ಆಧುನಿಕ ರೋಗಗಳಾದ H1N1, AIDS, DENGUE, CHICKEN GUNYA, SWINE FLUE...... ಇತ್ಯಾದಿ ಖಾಯಿಲೆಗಳು ಇರಲಿಲ್ಲ, ಇದ್ದರೂ ಗುರುತಿಸಲಾಗುತ್ತಿರಲಿಲ್ಲ, ಗುರುತಿಸಲು ಸಾಧನಗಳಿರಲಿಲ್ಲವೇನೋ? ಅ೦ದು Family Physician ಮೇಲೆ ಸ೦ಪೂರ್ಣ ನ೦ಬಿಕೆಯಿತ್ತು, ಅವಶ್ಯವಿದ್ದಾಗ ಮಾತ್ರ Specialist ಬಳಿ ಕಳುಹಿಸಲಾಗುತ್ತಿತ್ತು.
ಆದರೆ, ಇ೦ದು ಜನಗಳು ಅತೀ ವಿದ್ಯಾವ೦ತರಾಗಿದ್ದಾರೆ, ಸಕಲ ಕ್ಷೇತ್ರದಲ್ಲಿ ಅ೦ತರ್ಜಾಲದ ಮೂಲಕ ಮಾಹಿತಿ ಸ೦ಗ್ರಹಿಸುತ್ತಿದ್ದಾರೆ, ವೈದ್ಯರಿಗಿ೦ತ ಅ೦ತರ್ಜಾಲದ ಮೇಲೆ ನ೦ಬಿಕೆ ಅಪಾರ, ವೈದ್ಯರನ್ನು Cross-check ಮಾಡುವ ವೈಖರಿ ದಿನೇ-ದಿನೇ ಹೆಚ್ಚುತ್ತಿದೆ, Consumer protection ಭಾರತದಲ್ಲಿ ಕಾನೂನಾತ್ಮಕ ಬೆ೦ಬಲ ನೀಡುತ್ತಿದೆ..... ಮಾತೆತ್ತಿದರೆ ಕಾನೂನಿನ ಹೋರಾಟಕ್ಕೆ ಹಿ೦ಜರಿಯದ ಮ೦ದಿ, ಅದೇ ರೀತಿ ವೈದ್ಯರ, ನುರಿತ ವೈದ್ಯರ ಸ೦ಖ್ಯೆ, ರೋಗಿಗಳ ಸ೦ಖ್ಯೆ ಹೆಚ್ಚುತ್ತಿದೆ, ಅನೇಕ Hi-profile ನೌಕರಿಯಲ್ಲಿ ಕುಟು೦ಬದ ಆರೊಗ್ಯದ ವಿಚಾರದಲ್ಲಿ ಖರ್ಚು-ವೆಚ್ಚಗಳನ್ನು ಸ೦ಸ್ಥೆಗಳು ನೀಡುವ ಕಾರಣಕ್ಕೆ ಎಲ್ಲದಕ್ಕೊ specialist ಸೌಕರ್ಯ ಪಡೆಯುವ ಮ೦ದಿಯೇ ಹೆಚ್ಚು. ಅಪಾರ ಹಣ invest ಮಾಡಿ ಆಸ್ಪತ್ರೆ, Diagnostic lab ನಿರ್ಮಾಣ ಮಾಡಿರುವ ಉದ್ಯಮೆದಾರರು ಆಲೋಚಿಸುವುದು Return on Investment!
ವಾಸ್ತವ ಹೀಗಿರುವಾಗ, ವಯಸ್ಸಿನ, ರೊಗದ, ಗುಣಮುಖರಾಗುವ ಸಾಧ್ಯತೆಗಳ ಲೆಕ್ಕಾಚಾರವನ್ನು ಬದಿಗಿಟ್ಟು ರೋಗಿಗಳ, ಅವರ ಕುಟು೦ಬದ ಆರ್ಥಿಕ ಪರಿಸ್ಥಿತಿಯ,ಅವರಿಗೆ ಆರೋಗ್ಯ ವಿಮೆ ಪಾಲಿಸಿ ಇರುವ ಬಗ್ಗೆ ಖಚಿತಪಡಿಸಿಕೊ೦ಡು ಚಿಕಿತ್ಸೆ ಆರ೦ಭವಾಗುತ್ತದೆಯೇ ಹೊರತು ಅನ್ಯ ಗುಣಲಕ್ಷಣಗಳ ಆಧಾರದಡಿಯಲ್ಲ! ಈ ಎಲ್ಲ ಪ್ರಕ್ರಿಯೆಗಳಲ್ಲಿ ಅನುಭವಿಸುವುದು ವಯೋ ವೃದ್ಧ ರೋಗಿಗಳು!


No comments:
Post a Comment