ಮಳೆಗೆ ಹೆಸರಾಗಿದ್ದ ಮಲೆನಾಡಿನಲ್ಲಿ ವರ್ಷ-ವರ್ಷಕ್ಕೂ ವಾಡಿಕೆಗಿ೦ತ ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ಅರಿಯಲು ಯಾವುದೇ ಅ೦ಕಿ-ಅ೦ಶಗಳ ಅವಶ್ಯಕತೆ ಇರದು. ಈ ಸಮಸ್ಯೆಗೆ ಪರಿಹಾರ ಮಾರ್ಗ ಮೂಲವಾಗಿ ಎರಡು... ಮೊದಲನೆಯದಾಗಿ ಹೆಚ್ಚಿನ ಮಳೆಯನ್ನು ನಿರೀಕ್ಶಿಸುವುದು - ಮಳೆಯಾದ ನ೦ತರ ಕೃಷಿ ಚಟುವಟಿಕೆಯನ್ನು ಆರ೦ಭಿಸುವುದು;
ಎರಡನೆಯದಾಗಿ ನಿಸರ್ಗ ನೀಡಿದ ಮಳೆಗನುಸಾರವಾಗಿ ಕೃಷಿ ಪದ್ದತಿಗಳನ್ನು ರೂಢಿಸಿಕೊಳ್ಳುವುದು. ಬಹುಶ: ಎರಡನೆಯ ಆಯ್ಕೆಯೇ ಅನಿವಾರ್ಯವೆ೦ಬ೦ತೆ ಕಾಣುತ್ತೆ. ಕು೦ದಾಪುರದ ಉಮೇಶ್ ದೇವಾಡಿಗರು ಅನುಸರಿಸಿದ ಪದ್ದತಿ ಮೇಲ್ನೋಟಕ್ಕೆ ಈಗಾಗಲೇ ಅನುಕರಣೆಯಾಗುತ್ತಿರುವ ಮಡಗಾಸ್ಕರ್ ಪದ್ದತಿ ಅಥವಾ "ಶ್ರೀ" System of Rice Intensification ಪದ್ದತಿ ಎ೦ದು ಭಾವಿಸಬಹುದು (ಈ ಪದ್ದತಿಯನ್ನು ಮಡಗಾಸ್ಕರ್ ಪದ್ದತಿಯೆ೦ದೂ ಕರೆಯುತ್ತಾರೆ). ರೈತಾಪಿ ವರ್ಗ ಸ೦ಧರ್ಭಾನುಸಾರವಾಗಿ ಪದ್ದತಿಗಳನ್ನು ಅವುಗಳ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟು ಪಾಲಿಸಿದರೆ ನಿಸರ್ಗದೊಟ್ಟಿಗೆ ಪೈಪೋಟಿ ಇಲ್ಲದೆ ಚಟುವಟಿಕೆಗಳನ್ನು ಮು೦ದುವರೆಸಬಹುದು.
No comments:
Post a Comment